ನುಣುಪಾದ ಚರ್ಮಕ್ಕೆ ಈ ನೈಸರ್ಗಿಕ ವಸ್ತುಗಳೇ ಸಾಕು

ಶುಕ್ರವಾರ, 24 ನವೆಂಬರ್ 2017 (08:25 IST)
ಬೆಂಗಳೂರು: ನುಣುಪಾದ ಚರ್ಮ ನಮ್ಮದಾಗಬೇಕೆಂದು ಎಲ್ಲರೂ ಅದೇನೇನೋ ಸರ್ಕಸ್ ಮಾಡ್ತಾರೆ. ಅದೂ ಈ ಚಳಿಗಾಲದಲ್ಲಿ ತ್ವಚೆಯ ಸೌಂದರ್ಯಕಾಪಾಡಿಕೊಳ್ಳುವುದು ಕಷ್ಟದ ಮಾತೇ. ಆದರೆ ನಮ್ಮ ಹಿತ್ತಲಿನಲ್ಲೇ ಇದಕ್ಕೆ ಮದ್ದಿದೆ. ಅವು ಯಾವುವು ನೋಡೋಣ.
 

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಸುಲಭವಾಗಿ ಸಿಗುವ ವಸ್ತು. ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ತುಂಬಾ ಒಳ್ಳೆಯದು.

ಅಲ್ಯುವೀರಾ
ನಿಮ್ಮ ಹಿತ್ತಲಲ್ಲೇ ಬೆಳೆಸಬಹುದಾದ ಗಿಡ ಅಲ್ಯುವೀರಾ. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ. ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತಾಗುವುದಕ್ಕೆ ಇದು ಒಳ್ಳೆಯದು.

ರೋಸ್ ವಾಟರ್
ರೋಸ್ ವಾಟರ್ ಚರ್ಮಕ್ಕೆ ಕಾಂತಿ ನೀಡುವುದಷ್ಟೇ ಅಲ್ಲ. ಚರ್ಮದ ಅಂಗಾಂಶವನ್ನು ಸದೃಢಗೊಳಿಸುತ್ತದೆ.

ಸೌತೆಕಾಯಿ
ಸೌತೆಕಾಯಿ ಯಾರ ಮನೆಯಲ್ಲಿ ಇರಲ್ಲ. ಚರ್ಮದ ಕಪ್ಪು ಕಲೆಗಳು, ಉರಿ ತಪ್ಪಿಸಿಕೊಳ್ಳಲು ಸೌತೆಕಾಯಿ ನ್ಯಾಚುರಲ್ ಮದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ