ನಿಮ್ಮ ಸೊಂಟದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬೇಕಾ. ಹಾಗಾದ್ರೆ ಇಲ್ಲಿದೆ ನೋಡಿ ಸುಲಭ ವಿಧಾನ !
ಬುಧವಾರ, 11 ಏಪ್ರಿಲ್ 2018 (07:28 IST)
ಬೆಂಗಳೂರು : ಹೆಚ್ಚಿನವರಿಗೆ ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಇದು ಅನಾರೋಗ್ಯದ ಲಕ್ಷಣವಾಗಿದ್ದು ಕೊಬ್ಬು ಹೆಚ್ಚಿದಷ್ಟೂ ಅನಾರೋಗ್ಯವೂ ಹೆಚ್ಚು. ಸೊಂಟದ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಭಾಗದಲ್ಲಿ ಕೊಬ್ಬು ಮೊದಲಾಗಿ ಸಂಗ್ರಹಗೊಳ್ಳಲು ಪ್ರಾರಂಭವಾಗಿ ಅತ್ಯಂತ ಕಡೆಯದಾಗಿ ಕರಗುತ್ತದೆ. ಇದಕ್ಕೆ ಒಂದು ಸರಳ ಟಿಪ್ಸ್ಇಲ್ಲಿದೆ.
ಲಿಂಬೆರಸ ಬೆರೆಸಿದ ಉಗುರುಬೆಚ್ಚನೆಯ (ಅಥವಾ ಕೊಂಚ ಶುಂಠಿರಸ ಅಥವಾ ಜೇನನ್ನು ಬೆರೆಸಿ ಇನ್ನಷ್ಟು ರುಚಿಕರವಾಗಿಸಿದ ) ನೀರನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಸುಮಾರು ಎಪ್ಪತ್ತೈದು ಕೇಜಿ ತೂಕದ ವ್ಯಕ್ತಿಗಳಿಗೆ ದಿನಕ್ಕೆ ಒಂದು ಮಧ್ಯಮ ಗಾತ್ರದ ಲಿಂಬೆ ಸಾಕು. ದೊಡ್ಡದಾದರೆ ಅರ್ಧ ಸಾಕು. ಹೀಗೆ ಮಾಡಿದರೆ ಕೊಬ್ಬು ನಿಧಾನವಾಗಿ ಕರಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ