ಮಾನ್ಸೂನ್ ಬಂತೆಂದರೆ ಯಾವ ಬಟ್ಟೆ ಹಾಕೋದು ಅನ್ನೋದೆ ಒಂದು ದೊಡ್ಡ ಚಿಂತೆಯಾಗತ್ತೆ. ಬಿಳಿ ಬಟ್ಟೆ, ಉದ್ದವಾದ ಸ್ಕರ್ಟ್ ಧರಿಸಿದೆ ಕೊಳೆಯಾಗುತ್ತೆ ಎಂಬ ಭಯ, ತೆಳುವಾದ ಬಟ್ಟೆಗಳು ಮಲೆಯಲ್ಲಿ ಒದ್ದೆಯಾದ್ರೆ ಪಾರದರ್ಶಕವಾಗಿ ಕಾಣತ್ತೆ ಎಂಬ ಚಿಂತೆ. ನೋಡೂಕೂ ಸ್ಟೈಲೀಶ್ ಆಗಿ ಕಾಣ್ಬೇಕು, ಮಳೆಗಾಲಕ್ಕೂ ಒಗ್ಗುವಹಾಗಿರಬೇಕು ಅನ್ನೋದು ಸಮಸ್ಯೆ ಅಲ್ವಾ. ಈ ಯೋಚ್ನೆ ಬಿಡಿ ಇಲ್ಲಿದೆ ಮಾನ್ಸೂನ್ ನಲ್ಲಿ ಯಾವ ಡ್ರೆಸ್ ಹಾಕೋಬಹುದು ಎಂಬ ಸಲಹೆ.
* ವೃತ್ತಿಪರರು, ಕಾಲೇಜಿಗೆ ಹೋಗುವವರು ಹೀಗೆ ಯಾರೇ ಆಗಿರಲಿ ಮಳೆಗಾಲದಲ್ಲಿ ಬಿಳಿಬಟ್ಟೆ, ಬಣ್ಣ ಬಿಡುವಂತ ಬಟ್ಟೆ, ಲಾಂಗ್ ಸ್ಕರ್ಟ್ ಅಥವಾ ಪ್ಯಾಂಟ್ ಗಳನ್ನು ಅವಾಯ್ಡ್ ಮಾಡೋದು ಒಳ್ಳೆದು. ಮಾನ್ಸೂನಲ್ಲಿ ಹೆಚ್ಚಾಗಿ ಗ್ರೇಕಲರ್, ಬ್ಲ್ಯಾಕ್, ರೆಡ್, ಬ್ಲ್ಯೂ, ಆರೆಂಜ್ ಹೀಗೆ ಡಾರ್ಕ್ ಕಲರ್ ಬಟ್ಟೆಗಳನ್ನು ಧರಿಸುವುದು ಉತ್ತಮ.