ರಾತ್ರಿ ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಲಗಿ

Krishnaveni K

ಗುರುವಾರ, 11 ಏಪ್ರಿಲ್ 2024 (13:37 IST)
ಬೆಂಗಳೂರು: ಕೊಬ್ಬರಿ ಎಣ್ಣೆಯಲ್ಲಿ ನಮ್ಮ ಚರ್ಮಕ್ಕೆ ಉಪಯುಕ್ತವಾದ ಅಂಶವಿದ್ದು ಇದನ್ನು ರಾತ್ರಿ ಹಚ್ಚಿಕೊಂಡು ಮಲಗುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಹದಿಹರೆಯದ ಯುವತಿಯರು ಮೊಡವೆ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಏನೇನೋ ಮನೆ ಮದ್ದುಗಳನ್ನು ಮಾಡಿ ನೋಡಿರುತ್ತಾರೆ. ಆದರೆ ಅವರು ಸುಲಭವಾಗಿ ಕೊಬ್ಬರಿ ಎಣ್ಣೆ ಬಳಸಿ ಮೊಡವೆ ನಿವಾರಿಸಬಹುದು. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ ಮೊಡವೆ ಮೂಡುವುದು ಕಡಿಮೆಯಾಗುತ್ತದೆ.

ಕೇವಲ ಮೊಡವೆ ಸಮಸ್ಯೆ ಮಾತ್ರವಲ್ಲ. ಒಂದು ವಯಸ್ಸು ದಾಟಿದ ಮೇಲೆ ಚರ್ಮ ಸುಕ್ಕುಗಟ್ಟುವಿಕೆ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಒಣಹವೆ ಹವಾಮಾನವಿರುವಾಗ ಈ ಸಮಸ್ಯೆ ಮುಖದ ಅಂದಗೆಡಿಸುತ್ತದೆ. ಹೀಗಿದ್ದಾಗ ಮುಖವನ್ನು ಕೋಮಗೊಳಿಸಲು ಕೊಬ್ಬರಿ ಎಣ್ಣೆ ಹಚ್ಚಿದರೆ ಸೂಕ್ತ.

ಅಷ್ಟೇ ಅಲ್ಲದೆ, 30 ದಾಟಿದ ಮೇಲೆ ಮುಖದಲ್ಲಿ ಕಂಡುಬರುವ ಕಲೆಗಳು, ಚರ್ಮ ಸುಕ್ಕುಗಟ್ಟುವಿಕೆ, ಕಣ್ಣಿನ ಕೆಳಗೆ ಕಪ್ಪಾಗುವುದು ಇತ್ಯಾದಿ ಸಮಸ್ಯೆಗಳಿಗೂ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿ ಮಲಗುವುದರಿಂದ ಪರಿಹಾರ ಸಿಗುತ್ತದೆ. ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ