ಉದ್ದನೆಯ ಉಗುರು ಬೇಕಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

Krishnaveni K

ಬುಧವಾರ, 17 ಏಪ್ರಿಲ್ 2024 (13:15 IST)
ಬೆಂಗಳೂರು: ಕೈ ಉಗುರು ಉದ್ದವಾಗಿರಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಉದ್ದನೆಯ ಉಗುರಿಗೆ ನೈಲ್ ಪಾಲೀಶ್ ಹಾಕಿಕೊಂಡರೆ ಸುಂದರವಾಗಿ ಕಾಣುತ್ತಾರೆ.

ಆದರೆ ಕೆಲವರಿಗೆ ಬೇಗನೇ ಉಗುರು ಬೆಳೆಯುವುದಿಲ್ಲ. ಇದಕ್ಕೆ ಪೋಷಕಾಂಶದ ಕೊರತೆಯೂ ಕಾರಣವಿರಬಹುದು. ಆದರೆ ನಮಗೆ ಬೇಗನೇ ಉಗುರುಗಳು ಉದ್ದವಾಗಿ ಬೆಳೆಯಬೇಕು ಎಂದಾದರೆ ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ಬಯಕೆ ಈಡೇರಿಸಿಕೊಳ್ಳಬಹುದು. ಅದು ಏನೆಂದು ನೋಡೋಣ.

ವಾಸ್ಲಿನ್ ಬಳಸಿ
ನಾಲ್ಕೇ ದಿನದಲ್ಲಿ ಉದ್ದನೆಯ ಉಗುರು ನಿಮ್ಮದಾಗಬೇಕು ಎಂದಿದ್ದರೆ ಕೈಗೆ ವಾಸ್ಲಿನ್ ಬಳಸಿ. ಕೈ ಉಗುರಿಗೆ ನಿಯಮಿತವಾಗಿ ವಾಸ್ಲಿನ್ ಹಚ್ಚುತ್ತಿದ್ದರೆ ಉಗುರುಗಳು ಬೇಗನೇ ಬೆಳೆಯುತ್ತವೆ.
ಕ್ಯಾಲ್ಶಿಯಂ ಆಹಾರ ಸೇವಿಸಿ: ಮಜ್ಜಿಗೆಯಂತಹ ಕ್ಯಾಲ್ಶಿಯಂ ಅಧಿಕವಿರುವ ಆಹಾರ ವಸ್ತುಗಳನ್ನು ಹೆಚ್ಚು ಬಳಕೆ ಮಾಡಿದಲ್ಲಿ ಉಗುರುಗಳು ಬೇಗನೇ ಉದ್ದ ಬೆಳೆಯುತ್ತವೆ.
ಉಗುರು ಕಚ್ಚುವ ಅಭ್ಯಾಸ ಬಿಡಿ: ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಉಗುರುಗಳು ಅಂದಗೆಡುವುದಲ್ಲದೆ, ಬೇಗನೇ ಬೆಳೆಯುವುದಿಲ್ಲ. ಹೀಗಾಗಿ ಈ ಅಭ್ಯಾಸ ಬಿಡಿ. ಈ ಸಿಂಪಲ್ ಟ್ರಿಕ್ಸ್ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ