ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

Krishnaveni K

ಶನಿವಾರ, 4 ಮೇ 2024 (11:11 IST)
ಬೆಂಗಳೂರು: ಬೇಸಿಗೆಯಲ್ಲಿ ಸನ್ ಸ್ಕ್ರೀನ್ ಲೋಷನ್ ಬಳಸದೇ ಮನೆಯಿಂದ ಹೊರಗೆ ಹೋದರೆ ಎಲ್ಲಿ ಚರ್ಮ ಕಾಂತಿ ಕಳೆದುಕೊಳ್ಳುತ್ತದೋ ಎಂಬ ಭಯ ಕಾಡುತ್ತದೆ. ಹಾಗಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಸನ್ ಸ್ಕ್ರೀನ್ ಲೋಷನ್ ರೆಸಿಪಿಯೊಂದನ್ನು ನೋಡೋಣ.

ರಾಸಾಯನಿಕಯುಕ್ತ ಸನ್ ಸ್ಕ್ರೀನ್ ಲೋಷನ್ ಬಳಸಲು ಇಷ್ಟಪಡದೇ ಇದ್ದರೆ ಮನೆಯಲ್ಲಿಯೇ ಸುಲಭವಾಗಿ ಲೋಷನ್ ತಯಾರಿಸಿಕೊಳ್ಳಬಹುದು. ಇದಕ್ಕೆ ಮನೆಯಲ್ಲಿಯೇ ಆದಷ್ಟು ನಾವು ದೈನಂದಿನವಾಗಿ ಬಳಸುವ ವಸ್ತುಗಳನ್ನೇ ಬಳಕೆ ಮಾಡಬಹುದು. ಯಾವೆಲ್ಲಾ ವಸ್ತುಗಳು ಬೇಕು ಮತ್ತು ತಯಾರಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.

ಬೇಕಾಗುವ ವಸ್ತುಗಳು
¼ ಕಪ್ ತೆಂಗಿನ ಎಣ್ಣೆ
2 ಟೇಬಲ್ ಸ್ಪೂನ್ ಝಿಂಕ್ ಆಕ್ಸೈಡ್
1.4 ಕಪ್ ಅಲ್ಯುವೀರಾ ಜೆಲ್
25 ಡ್ರಾಪ್ ವಾಲ್ ನಟ್ ಆಯಿಲ್
1 ಕಪ್ ಶಿಯಾ ಬಟರ್

ಮಾಡುವ ವಿಧಾನ
ಝಿಂಕ್ ಆಕ್ಸೈಡ್ ಮತ್ತು ಅಲ್ಯುವೀರಾ ಜೆಲ್ ಹೊರತುರಪಡಿಸಿ ಈ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಮಿಕ್ಸ್ ಮಾಡಿ. ಒಂದು ಪ್ಯಾನ್ ನಲ್ಲಿ ಮಧ‍್ಯಮ ಉರಿಯಲ್ಲಿ ಶಿಯಾ ಬಟರ್ ಮತ್ತು ತೆಂಗಿನ ಎಣ್ಣೆ ಕರಗುವಷ್ಟು ಬಿಸಿ ಮಾಡಿ.
ಇದು ತಣ್ಣಗಾದ ಬಳಿಕ ಅಲ್ಯುವೀರಾ ಜೆಲ್ ಮಿಕ್ಸ್ ಮಾಡಿ.
ಪೂರ್ತಿ ತಣ್ಣಗಾದ ಮೇಲೆ ಝಿಂಕ್ ಆಕ್ಸೈಡ್ ನ್ನು ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ.  ಇದನ್ನು ಒಂದು ಗ್ಲಾಸ್ ಜಾರ್ ನಲ್ಲಿ ಶೇಖರಿಸಿಡಿ. ಇದನ್ನು ನಿಯಮಿತವಾಗಿ ಬಳಕೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ