ಬೆಂಗಳೂರು: ಅಸ್ತಮಾ ರೋಗಿಗಳು ಹಾಲು ಕುಡಿಯಬಹುದೇ ಎಂಬ ಅನುಮಾನ ಅನೇಕರಿಗಿರುತ್ತದೆ. ಅವರ ಅನುಮಾನಗಳಿಗೆ ಈ ಲೇಖನದಲ್ಲಿದೆ ಪರಿಹಾರ.
ಹಾಲನ್ನು ಹಾಗೆಯೇ ಸೇವಿಸುವುದರಿಂದ ಕಫ ಹೆಚ್ಚಾಗುವುದು. ಹೀಗಾಗಿ ಕಫ ಉತ್ಪತ್ತಿಯಾಗುವುದರಿಂದ ಅಸ್ತಮಾ ಸಮಸ್ಯೆ ಉಲ್ಬಣವಾಗಬಹುದು. ಹೀಗಾಗಿಯೇ ಹಾಲು ಅಸ್ತಮಾ ರೋಗಿಗಳಿಗೆ ಒಳ್ಳೆಯದಲ್ಲ. ಹಾಗಂತ ಹಾಲನ್ನು ಸೇವಿಸಲೇಬೇಕೆಂದಿದ್ದರೆ ಕೆಲವೊಂದು ಟಿಪ್ಸ್ ಫಾಲೋ ಮಾಡಬೇಕಾಗುತ್ತದೆ.
ಹಾಲಿಗೆ ಸ್ವಲ್ಪ ಅರಸಿನ ಪುಡಿ ಹಾಕಿ ಸೇವಿಸುವುದರಿಂದ ಕಫ ಉತ್ಪತ್ತಿಯಾಗದಂತೆ ತಡೆಯಬಹುದು. ಅರಸಿನದಲ್ಲಿ ಉರಿಯೂತ ತಡೆಯುವ ಗುಣವಿದ್ದು, ಉರಿಯೂತದಿಂದ ಬರಬಹುದಾದ ಉಸಿರಾಟ ಸಂಬಂಧೀ ಸಮಸ್ಯೆಗಳು ಬಾರದಂತೆ ತಡೆಯುತ್ತದೆ. ಹೀಗಾಗಿ ಹಾಲು ಸೇವನೆ ಮಾಡುವಾಗ ಚಿಟಿಕೆ ಅರಸಿನ ಬಳಸಿ.
ಅಸ್ತಮಾ ರೋಗಿಗಳು ಅರಸಿನ ಬಳಸಿ ಹಾಲು ಸೇವಿಸುವುದಿದ್ದರೂ ರಾತ್ರಿ ಹೊತ್ತು ಹಾಲು ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅದರ ಬದಲಿಗೆ ಬೆಳಗಿನ ಹೊತ್ತು ಅಥವಾ ಸಂಜೆ ವೇಳೆಗೆ ಊಟಕ್ಕಿಂತ ಮೊದಲು ಅರಸಿನ ಹಾಕಿದ ಹಾಲು ಸೇವನೆ ಮಾಡಬಹುದು.