ಬೆಂಗಳೂರು: ಸೆಕೆಗಾಲದಲ್ಲಿ ದಾಹವಾದಾಗ ತಂಪಾದ ಕೂಲ್ ಡ್ರಿಂಕ್ ಸೇವನೆ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಇದು ನಾಲಿಗೆಗೆ ಹಿತಕರವಾದರೂ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ನೋಡಿ.
ವಿಪರೀತ ದಾಹವೆಂದು ಸೆಕೆಗಾಲದಲ್ಲಿ ಪ್ರತಿ ನಿತ್ಯವೂ ಕೋಲ್ಡ್ ಡ್ರಿಂಕ್ಸ್ ಸೇವಿಸುತ್ತಿದ್ದರೆ ಅದು ನಿಮ್ಮ ಯಕೃತ್ ನ್ನು ಹಾಳು ಮಾಡಬಹುದು. ಕೋಲ್ಡ್ ಡ್ರಿಂಕ್ಸ್ ದೀರ್ಘಕಾಲದ ಯಕೃತ್ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಣ್ಣ ಬಣ್ಣದ ತಂಪು ಪಾನೀಯಗಳಲ್ಲಿ ಸಕ್ಕರೆ ಪ್ರಮಾಣ ನಿಗದಿಂತ ಹೆಚ್ಚಾಗಿರುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಕೇವಲ ಯಕೃತ್ ಮಾತ್ರವಲ್ಲ, ಇದರಿಂದ ಇನ್ಸುಲಿನ್ ಉತ್ಪತ್ತಿ ಹೆಚ್ಚು ಮಾಡಬಹುದು. ಇದರಿಂದ ಮಧುಮೇಹದಂತಹ ಸಮಸ್ಯೆ ತಂದೊಡ್ಡಬಹುದು.
ಅಲ್ಲದೆ ಸಂಸ್ಕರಿತ ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾಗಿ ಬೇಡದ ಕೊಬ್ಬು ಸಂಗ್ರಹವಾಗಬಹುದು. ಇದರಿಂದ ಬಳಲಿಕೆ, ತೂಕ ಹೆಚ್ಚಳ ಇತ್ಯಾದಿ ಸಮಸ್ಯೆ ಕಂಡುಬರಬಹುದು. ಯಕೃತ್ ನಲ್ಲಿ ಬೇಡದ ಕೊಬ್ಬಿನಾಂಶ ಶೇಖರಣೆಯಾದರೆ ಚಯಾಪಚಯ ಕ್ರಿಯೆ ಮೇಲೂ ಪರಿಣಾಮ ಬೀರಬಹುದು. ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.