ಸನ್ ಬರ್ನ್ ತಡೆಯಲು ಈ ಯೋಗ ಪೋಸ್ ಟ್ರೈ ಮಾಡಿ

Krishnaveni K

ಗುರುವಾರ, 2 ಮೇ 2024 (12:05 IST)
Photo Courtesy: Twitter
ಬೆಂಗಳೂರು: ಬೇಸಿಗೆಯ ಬೇಗೆಗೆ ಚರ್ಮದ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಅದರಲ್ಲೂ ಸನ್ ಬರ್ನ್ ಸಮಸ್ಯೆ ಅನೇಕರನ್ನು ಕಾಡುತ್ತದೆ. ಇದಕ್ಕೆ ಯೋಗಾಸನದಲ್ಲಿ ಬೆಸ್ಟ್ ಪರಿಹಾರವಿದೆ.

ಸನ್ ಬರ್ನ್ ಎನ್ನುವುದು ಚರ್ಮಕ್ಕೆ ಬರುವ ಸಮಸ್ಯೆ. ಇದಕ್ಕೆ ಯೋಗಾಸನದಲ್ಲೂ ಪರಿಹಾರವಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಯೋಗದಲ್ಲಿ ಎಲ್ಲಾ ರೋಗಗಳಿಗೂ ಪರಿಹಾರವಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಬಾಲಾಸನ ಮಾಡುವುದರಿಂದ ಸನ್ ಬರ್ನ್ ಸಮಸ್ಯೆಗೆ ಪರಿಹಾರ ಸಿಗುವುದು. ಇದನ್ನು ಮಾಡುವುದು ಹೇಗೆ ನೋಡೋಣ.

ಬಾಲಾಸನ ಮಾಡುವ ವಿಧಾನ
ಹೆಸರೇ ಹೇಳುವ ಹಾಗೆ ಇದು ಮಕ್ಕಳ ರೀತಿಯ ಪೋಸ್. ಕಾಲಿನ ಹೆಬ್ಬೆರಳು ನೆಲಕ್ಕೆ ತಾಕುವಂತೆ ಎರಡೂ ಮೊಣಕಾಲುಗಳು ಪ್ರತ್ಯೇಕ ಮಾಡಿ ಮ್ಯಾಟ್ ಮೇಲೆ ಮಲಗಿ. ಹಿಮ್ಮಡಿಗಳಲ್ಲಿ ಕುಳಿತುಕೊಂಡು ಹಣೆಯನ್ನು ನೆಲಕ್ಕೆ ಬಾಗಿಸಿ. ಎರಡೂ ಕೈಗಳನ್ನು ಸ್ವಲ್ಪ ಮುಂದಕ್ಕೆ ಇರಿಸಿಕೊಳ್ಳಿ. ಈ ಪೋಸ್ ಮೂಲಕ ಸೊಂಟ, ಬೆನ್ನು, ತೊಡೆಗಳಿಗೆ ಚಲನೆ ಸಿಗುತ್ತದೆ. ಈ ಪೋಸ್ ಸನ್ ಬರ್ನ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ನಿಯಮಿತವಾಗಿ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ