ರೋಸ್ ಡೇ ಆಚರಿಸುವುದರ ಹಿನ್ನಲೆ ತಿಳಿದುಕೊಳ್ಳಿ

Krishnaveni K

ಬುಧವಾರ, 7 ಫೆಬ್ರವರಿ 2024 (08:35 IST)
ಬೆಂಗಳೂರು: ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಇದು ವ್ಯಾಲೆಂಟೈನ್ ವೀಕ್ ಎಂದೇ ಚಿರಪರಿಚಿತವಾಗಿದೆ.

ಫೆಬ್ರವರಿ 14 ರ ವ್ಯಾಲೆಂಟೈನ್ ದಿನಕ್ಕೆ ಪೂರ್ವಭಾವಿಯಾಗಿ ರೋಸ್ ಡೇ ದಿನ ಆಚರಿಸಲಾಗುತ್ತದೆ. ಇಂದು ಫೆಬ್ರವರಿ 7 ನೇ ದಿನವಾಗಿದ್ದು, ಇಂದಿನ ದಿನವನ್ನು ರೋಸ್ ಡೇ ಆಗಿ ಆಚರಿಸಲಾಗುತ್ತದೆ. ಪ್ರೇಮಿಗಳು ಪರಸ್ಪರ ಗುಲಾಬಿ ಹೂ ಕೊಟ್ಟು ತಮ್ಮ ಪ್ರೀತಿ ನಿವೇದಿಸಿಕೊಳ್ಳುವ ದಿನ. ಹಾಗಿದ್ದರೆ ರೋಸ್ ಡೇ ಆಚರಿಸುವುದು ಯಾಕೆ? ಇದರ ಹಿನ್ನಲೆಯೇನು ಎಂದು ತಿಳಿದುಕೊಳ್ಳಿ.

ರೋಸ್ ಡೇ ಹಿನ್ನಲೆ
ಗುಲಾಬಿ ಎಂದರೆ ಪ್ರೀತಿಯ ಸಂಕೇತ. ಅದರಲ್ಲೂ ಕೆಂಪು ಗುಲಾಬಿ ಎಂದರೆ ಪ್ರೇಮಿಗಳಿಗೆ ಬಲು ಇಷ್ಟ. ರೋಮನ್ ಇತಿಹಾಸದ ಪ್ರಕಾರ ಗುಲಾಬಿ ಎಂದರೆ ಕೌತುಕದ ಸಂಕೇತವಾಗಿದೆ. ಏಷ್ಯಾ ಮತ್ತು ಅರೆಬಿಯನ್ ಸಂಸ್ಕೃತಿಯಲ್ಲಿ ಗುಲಾಬಿಯನ್ನು ಪ್ರೀತಿಯ ಸಂಕೇತವಾಗಿ ಕರೆಯಲಾಗುತ್ತದೆ. ವಿಕ್ಟೋರಿಯನ್ಸ್ ಮೊದಲ ಬಾರಿಗೆ ಗುಲಾಬಿಯನ್ನು ಪ್ರೀತಿಯ ಸಂಕೇತವಾಗಿ ಬಳಸಲು ಆರಂಭಿಸಿದರು ಎನ್ನಲಾಗುತ್ತದೆ. ಪರಸ್ಪರ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ಗುಲಾಬಿಯನ್ನು ಸಾಂಕೇತಿಕವಾಗಿ ನೀಡಲಾಗುತ್ತದೆ.

ನೀವು ನಿಮ್ಮ ಪ್ರೀತಿಪಾತ್ರರಿಗೆ ಒಂದು ಗುಲಾಬಿ ಹೂ ಕೊಡುತ್ತೀರೋ, ಇಲ್ಲವೇ ಬೊಕೆಯನ್ನೇ ನೀಡುತ್ತೀರೋ ಗೊತ್ತಿಲ್ಲ. ಆದರೆ ವಯಸ್ಸಿನ ಇತಿಮಿತಿಯಲ್ಲದೇ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಗುಲಾಬಿ ಸೂಕ್ತ. ಜೊತೆಗೆ ನಿಮ್ಮ ಪ್ರೇಮಿಯನ್ನು ಇಂಪ್ರೆಸ್ ಮಾಡಲು ಒಂದು ಕೆಂಪು ಗುಲಾಬಿಗಿಂತ ಬೇರೆ ಬೇಕೇ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ