ತಮ್ಮ ಕೂದಲಿನ ಆರೈಕೆ ಮಾಡಲು ಹಿಂದಿನ ಕಾಲದಲ್ಲಿ ಮೆಹೆಂದಿಯನ್ನು ಹಲವು ರೀತಿಯಲ್ಲಿ ಬಳಸುತ್ತಿದ್ದರು. ಈಗಾಲೂ ಹಲವು ಮಂದಿ ಮೆಹೆಂದಿಯನ್ನು ಹಲವು ಕಾರಣಕ್ಕಾಗಿ ಬಳಸುತ್ತಿದ್ದಾರೆ.
ತಿಂಗಳಿಗೆ ಒಮ್ಮೆಯಾದರೂ ಮೆಹೆಂದಿಯನ್ನು ಹಚ್ಚುವುದರಿಂದ ಸಿಗುವ ಪ್ರಯೋಜನಗಳು ಹೀಗಿವೆ.
ತಲೆ ಉರಿ ದೂರವಾಗುತ್ತದೆ.
ತಲೆಹೊಟ್ಟು ಕಡಿಮೆಯಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂದಲಿನ ಬಣ್ಣ ಬದಲು ಮಾಡಲು ಸಹಾಯವಾಗುತ್ತದೆ.
ನಿದ್ರಾಹೀನತೆಯನ್ನು ದೂರಾ ಮಾಡುತ್ತದೆ
ಇದು ಟ್ಯಾನಿಕ್ ಅಂಶವನ್ನು ಹೊಂದಿದ್ದು, ಕೂದಲಿಗೆ ಉತ್ತಮ ಬಣ್ಣವನ್ನು ನೀಡುವುದಲ್ಲದೆ ಕೂದಲನ್ನು ಬಲಪಡಿಸುತ್ತದೆ.
ಇದರಿಂದ ಕೂದಲನ್ನು ಆರೋಗ್ಯವಾಗಿರುತ್ತದೆ. ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ನೆತ್ತಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಕೂದಲನ್ನು ತುಂಬಾ ಮೃದುಗೊಳಿಸುತ್ತದೆ.
ಮೆಹಂದಿ ನೈಸರ್ಗಿಕ ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು, ಅದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
ಆದರೆ ಮೆಹೆಂದಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಯೋಚನೆ ಮಾಡಬೇಕು. ಇಂದು ಮಾರುಕಟ್ಟೆಗೆ ಕೆಮಿಕಲ್ ಮಿಶ್ರಿತ ಮೆಹೆಂದಿ ಪುಡಿ ಇರುವುರಿಂದ ಹುಷಾರ್ ಆಗಿ ಇರಬೇಕು.