ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಈ ಪೇಸ್ಟ್ ಹಚ್ಚಿ

ಸೋಮವಾರ, 6 ಮೇ 2019 (08:24 IST)
ಬೆಂಗಳೂರು : ತಲೆಹೊಟ್ಟಿನ ಸಮಸ್ಯೆ ಅನೇಕರನ್ನು ಕಾಡುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್ ಯುಕ್ತ ಶಾಂಪುಗಳನ್ನು ಬಳಸಿ ಕೂದಲನ್ನು ಹಾಳುಮಾಡಿಕೊಳ್ಳುತ್ತಾರೆ. ಅದರ ಬದಲು ಮನೆಯಲ್ಲಿ ಈ ಪೇಸ್ಟ್ ನ್ನು ತಯಾರಿಸಿ ಕೂದಲಿಗೆ ಹಚ್ಚದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.




3-4 ಚಮಚ ಮೆಂತ್ಯಕಾಳು, 3 ಚಮಚ ನಿಂಬೆ ರಸ, ಚಮಚ ಮೊಸರು, 1 ಚಮಚ ಬೇವಿನ ಪುಡಿ ತೆಗೆದುಕೊಳ್ಳಿ. ರಾತ್ರಿ ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಮಿಕ್ಸಿ ಮಾಡಿ ಅದಕ್ಕೆ ಮೊಸರು, ನಿಂಬೆ ರಸ, ಬೇವಿನ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ.


ಕೂದಲಿನ ಬುಡಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಅರ್ಧ ಗಂಟೆ ನಂತ್ರ ಕೂದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಬಳಸಿ.ಇದರಿಂದ ತಲೆಹೊಟ್ಟಿನ ಸಮಸ್ಯೆ ಕಾಡಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ