ಒರಟಾದ ಕೈಗಳ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಬುಧವಾರ, 21 ಫೆಬ್ರವರಿ 2018 (07:01 IST)
ಬೆಂಗಳೂರು : ನಮ್ಮ ಕೈಗಳು ಗಾಳಿ, ಬಿಸಿಲು, ಧೂಳು ಮತ್ತು ರಾಸಾಯನಿಕಗಳಿಂದಾಗಿ  ಅದರ ತ್ವಚೆಯ ಹೊರಗಿನ ಪದರವು ಹಾನಿಗೊಂಡು ಒರಟಾಗಿರುತ್ತದೆ. ಇದರಿಂದ ಕೈಗಳು ನೋಡಲು ಅಸಹ್ಯವಾಗಿರುತ್ತದೆ. ಕೈಗಳ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ.


*ಒಂದು ಚಮಚ ತಾಜಾ ಹಾಲಿನ ಕೆನೆಯನ್ನು ನಿಮ್ಮ ಕೈಗಳಲ್ಲಿ ತೆಗೆದುಕೊಳ್ಳಿ ಮತ್ತು ಅದನ್ನು 10 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿ ದಿನ ಮಾಡಬಹುದು. ಹಾಲಿನ ಕೆನೆಯಲ್ಲಿ ಅಧಿಕ ಕೊಬ್ಬಿನ ಅಂಶಗಳಿದ್ದು, ಇದು ಸ್ವಾಭಾವಿಕ ಮೊಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.


*ನಿಮ್ಮ ಕೈಗಳ ಮೇಲೆ ಕಚ್ಛಾ ಜೇನು ತುಪ್ಪವನ್ನು ಲೇಪಿಸಿ ಮತ್ತು ಸ್ವಲ್ಪ ಹೊತ್ತು ಮೃದುವಾಗಿ ಮಸಾಜ್ ಮಾಡಿ. ಇದನ್ನು 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಜೇನು ತುಪ್ಪವು ಒಂದು ಬಗೆಯ ಸ್ವಾಭಾವಿಕ ಮೊಯಿಶ್ಚರೈಸರ್ ಆಗಿರುತ್ತದೆ. ಇದರಲ್ಲಿ ಸಮೃದ್ಧವಾದ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳು ಇರುತ್ತವೆ. ಇವು ತ್ವಚೆಗೆ ವಯಸ್ಸಾಗುವಿಕೆಯನ್ನು ತಡೆಯುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ