ಪರೀಕ್ಷೆ ಸುಲಭವಾಗಬೇಕಾದರೆ ಈ ಮಂತ್ರ ಪಠಿಸಿ!

ಶುಕ್ರವಾರ, 7 ಡಿಸೆಂಬರ್ 2018 (07:42 IST)
ಬೆಂಗಳೂರು: ಪರೀಕ್ಷೆ ವೇಳೆ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಭಯ ಆತಂಕ ಇದ್ದೇ ಇರುತ್ತದೆ. ನಾನು ಪಾಸಾಗುತ್ತೇನೋ, ಪರೀಕ್ಷೆ ಕಷ್ಟವಾದರೆ ಎಂಬೆಲ್ಲಾ ಆತಂಕಗಳು. ಈ ಭಯ ನಿವಾರಣೆಯಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕಾದರೆ ಏನು ಮಾಡಬೇಕು?

ವಿದ್ಯಾ ದೇವತೆ ಸರಸ್ವತಿಯನ್ನು ಭಕ್ತಿಯಿಂದ ಪೂಜಿಸಿದರೆ ಓದುವ ವಿಚಾರ ನಮ್ಮ ಮನಸ್ಸಿಗೆ ನಾಟುತ್ತದೆ. ಅದೇ ರೀತಿ ಧೈರ್ಯಕ್ಕಾಗಿ ಹನುಮಂತನನ್ನು ಧ್ಯಾನಿಸಿದರೆ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸವೂ ಬರುತ್ತದೆ.

ಹೀಗಾಗಿ ಪರೀಕ್ಷೆಗೆ ಮೊದಲು ಶ್ರದ್ಧಾ ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ‘ಓಂ ಸರಸ್ವತೇಯ ವಿದ್ಮಹೇ ಬ್ರಹ್ಮಪುತ್ರೇಯ ಧೀಮಹೀ, ತನ್ನೋ ದೇವಿ ಪ್ರಚೋದಯಾತ್’ ಎಂಬ ಮಂತ್ರವನ್ನು ಹೇಳಿ. ಜತೆಗೆ ಹನುಮಾನ್ ಚಾಲೀಸ್ ಓದಿದರೆ ಇನ್ನೂ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ