ಗಣಪತಿಯನ್ನು ಈ ರೀತಿ ಪೂಜಿಸುವುದರಿಂದ ಕೆಲಸಕ್ಕೆ ಬರುವ ವಿಘ್ನಗಳ ನಿವಾರಣೆ ಗ್ಯಾರಂಟಿ

ಶನಿವಾರ, 8 ಡಿಸೆಂಬರ್ 2018 (08:42 IST)
ಬೆಂಗಳೂರು: ಏನೇ ಕೆಲಸಕ್ಕೆ ಕೈ ಹಾಕಿದರೂ ನೂರೆಂಟು ವಿಘ್ನಗಳು ಬರುತ್ತಿವೆಯಲ್ಲಾ ಎಂದು ಚಿಂತಿತರಾಗಿದ್ದೀರಾ? ಹಾಗಿದ್ದರೆ ಪ್ರತಿನಿತ್ಯ ಗಣಪತಿಯನ್ನು ಈ ರೀತಿ ಪೂಜೆ ಮಾಡಬೇಕು.


ನಮಗೆ ಏನೇ ಕಾರ್ಯಗಳು ಸಿದ್ಧಿಯಾಗಬೇಕಾದರೆ ಎಡಸೊಂಡಿಲು ಗಣೇಶನನ್ನು ಪೂಜೆ ಮಾಡಬೇಕು. ಪ್ರತಿ ಮಂಗಳವಾರ ಅಭೀಷ್ಟ ಸಿದ್ಧಿಗಾಗಿ ಇಪ್ಪತ್ತೊಂದು ಕೆಂಪು ಕಡಲೆ ಹಾರ ಹಾಕಿ. ಕಡಲೆಯನ್ನು ಹಿಂದಿನ ದಿನ ಶುದ್ಧ ಮಡಿಯಲ್ಲಿ ನೆನೆ ಹಾಕಿ ತೊಳೆದು, ಮಾರನೆಯ ದಿನ ಪೂಜೆ ಸಮಯದಲ್ಲಿ ಸೂಜಿದಾರದಲ್ಲಿ ಹಾರ ಪೋಣಿಸಿ ಗಣೇಶನಿಗೆ ಗಕಾರ ಗಣಪತಿ ಅಷ್ಟೋತ್ತರ ಹೇಳಿ ಹಾಕಿ. ಕಾರ್ಯಸಿದ್ಧಿ ಸ್ತೋತ್ರವನ್ನು ಪ್ರತಿನಿತ್ಯ ನೂರೆಂಟು ಬಾರಿ ಜಪಿಸಿ.

ಕಾರ್ಯ ಸಿದ್ಧಿ ಗಣೇಶ ಸ್ತೋತ್ರ ಹೀಗಿದೆ ನೋಡಿ:
ಸಜಯತಿ ಸಿಂಧುರವದನೋ ದೇವೋ
ಯತ್ಪಾದ ಪಂಕಜ ಸ್ಮರಣಮ್
ವಾಸರ ಮಣಿರಿವ ತಮಾಸಾಂ ರಾಶೀನ
ನಾಶಯತಿ ವಿಘ್ನಾನಾಮ್

ಈ ಸ್ತೋತ್ರವನ್ನು ಪ್ರತಿನಿತ್ಯ 108 ಬಾರಿ ಹೇಳಿ ಗಣಪತಿಯನ್ನು ಸ್ತುತಿಸಿದರೆ ಕಾರ್ಯಸಿದ್ಧಿಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ