ಮಾಟ, ಮಂತ್ರಗಳ ಕಾಟದಿಂದ ಮುಕ್ತಿ ಪಡೆಯಲು ಯಾವ ಪೂಜೆ ಮಾಡಬೇಕು?

ಶನಿವಾರ, 8 ಡಿಸೆಂಬರ್ 2018 (07:36 IST)
ಬೆಂಗಳೂರು: ಯಾರೋ ನಮ್ಮ ಶತ್ರುಗಳು ಮನೆಗೆ ಅಥವಾ ಕುಟುಂಬ ಸದಸ್ಯರ ಮೇಲೆ ಮಾಟ ಮಂತ್ರ ಮಾಡಿ ನಮಗೆ ಕೆಡುಕು ಉಂಟು ಮಾಡಿದರೆ ಏನು ಮಾಡಬೇಕು?


ಇಂತಹ ದುಷ್ಟ ಶಕ್ತಿಗಳನ್ನು ನಿವಾರಿಸಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಶ್ರೀಚಕ್ರ ಅಂದರೆ ಅದು ಮಂಡಲದ ಮಧ್ಯೆ ಶ್ರೀ. ಶ್ರೀ ಎಂದರೆ ಸಾಕ್ಷಾತ್ ಪರಮೇಶ್ವರಿಯ ವಾಸ.

ಶುಕ್ರವಾರ, ರವಿವಾರ ಮತ್ತು ಹುಣ್ಣಿಮೆ ದಿನ ಶ್ರೀ ಚಕ್ರ ಪೂಜೆ ಅತ್ಯಂತ ಫಲದಾಯಕ. ಯಾರ ಮನೆಯಲ್ಲಿ ನಿತ್ಯ ಶ್ರೀಚಕ್ರ ಪೂಜೆ ನಡೆಯುತ್ತದೋ ಅಲ್ಲಿ ಸಾಕ್ಷಾತ್ ಪರಮೇಶ್ವರಿ ವಾಸವಿರುತ್ತಾಳೆ ಎಂಬ ನಂಬಿಕೆ. ಅವರಿಗೆ ದಾರಿದ್ರ್ಯ ಬರದು.

ಅಂತಹ ಮನೆಯಲ್ಲಿ ಶಾಂತಿ, ಸಂಪತ್ತು ನೆಲೆಸಿರುತ್ತದೆ. ಪ್ರತೀ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಶ್ರೀ ಚಕ್ರದ ಆರಾಧನೆ ನಡೆಯುವಲ್ಲಿ ಮಾಟ, ಮಂತ್ರ ಮತ್ತಿತರ ದುಷ್ಟ ಶಕ್ತಿಗಳ ಕಾಟ ನಡೆಯುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಶ್ರೀಚಕ್ರದ ಪೂಜೆ ಒಳ್ಳೆಯದು.

ಒಳಗೆ ಎಂಟು ಹೊರಗೆ ಹದಿನಾರು ದಳದ ಕಮಲವಿರುವ ಅಂಕುಡೊಂಕಿಲ್ಲದ ಗೆರೆಗಳಿರುವ ಶ್ರೀ ಚಕ್ರವನ್ನು ತಂದು ಯಾವುದಾದರೂ ದೇವಿ ದೇವಾಲಯದಲ್ಲಿ ಪೂಜೆ ಮಾಡಿಸಿ ಮನೆಗೆ ತಂದು ಪ್ರತಿನಿತ್ಯ ಪೂಜೆ ಮಾಡುತ್ತಿದ್ದರೆ ಸುಖ ಸಮೃದ್ಧಿ ನೆಲೆಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ