ದೇವಾಲಯದಲ್ಲಿ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುವ ಅಪರಾಧಗಳು ಯಾವುವು ಗೊತ್ತಾ?
ಶನಿವಾರ, 8 ಡಿಸೆಂಬರ್ 2018 (08:39 IST)
ಬೆಂಗಳೂರು: ದೇವಾಲಯಕ್ಕೆ ಹೋಗುವಾಗ ನಾವು ಹೇಗಿರಬೇಕು ಎಂಬುದಕ್ಕೆ ಕೆಲವು ಶಿಷ್ಟಾಚಾರಗಳಿವೆ. ಹಾಗಿದ್ದರೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅದು ಯಾವುವು ನೋಡೋಣ.
ಭಗವಂತನ ಮಂದಿರಕ್ಕೆ ಕೈ ಕಾಲು ತೊಳೆಯದೇ ಪ್ರವೇಶ ಮಾಡುವುದು.
ಸಾಕ್ಸ್ ಹಾಕಿಕೊಂಡು ಪ್ರವೇಶಿಸುವುದು
ಭಗವಂತನ ಮಂದಿರಕ್ಕೆ ಬೀಡಿ, ಸಿಗರೇಟು, ಮಾಂಸ, ಮಧ್ಯ ಸೇವಿಸಿ ಪ್ರವೇಶಿಸುವುದು.
ಚರ್ಮದ ಬೆಲ್ಟ್, ಚಪ್ಪಲಿ ಧರಿಸಿಕೊಂಡು ಹೋಗುವುದು.
ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
ಕೊಳೆತ, ಕೆಟ್ಟ ಅಥವಾ ಒಣಗಿದ ಹೂ/ಹಣ್ಣುಗಳನ್ನು ಅರ್ಪಿಸುವುದು.
ದೇವಾಲಯದ ಹೊಸ್ತಿಲು, ಕಿಟಿಕಿಗಳಲ್ಲಿ ಕರ್ಪೂರ ಹಚ್ಚುವುದು.
ದೇವಾಲಯಕ್ಕೆ ಅರ್ಪಿಸಿದ ಸಾಮಗ್ರಿಗಗಳನ್ನು ಅಂಗಡಿಗಳಿಗೆ ಮಾಡಿ ಮತ್ತೆ ಅದೇ ಸಾಮಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದೇ ಇರುವುದು.
ಭಗವಂತನ ಸಮ್ಮುಖದಲ್ಲಿಯೇ ಪ್ರದಕ್ಷಿಣೆ ಮಾಡುವುದು, ನೆಲಕ್ಕೆ ಬಾಗಿ ನಮಸ್ಕರಿಸದೇ ಇರುವುದು.
ಕಾಲು ಚಾಚಿ ಕೂರುವುದು ಮತ್ತು ಕುರ್ಚಿ ಇನ್ನಿತರ ಆಸನಗಳಲ್ಲಿ ಕೂರುವುದು.
ಭಗವಂತನ ಸಮ್ಮುಖ ಭೋಜನ ಮಾಡುವುದು.
ದೇವಾಲಯದಲ್ಲಿ ಬೇರೆಯವರಿಗೆ ಕೆಡುಕು ಉಂಟುಮಾಡುವುದು, ಕೆಟ್ಟ ಮಾತನಾಡುವುದು.