ಚಂದ್ರಗ್ರಹಣ ಯಾವ ರಾಶಿ, ನಕ್ಷತ್ರದವರಿಗೆ ದೋಷ?

ಬುಧವಾರ, 31 ಜನವರಿ 2018 (10:08 IST)
ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ. ಧಾರ್ಮಿಕ ಶ್ರದ್ಧೆ ನಂಬಿಕೆ ಇರುವವರು ಇಂದು ಶ್ರದ್ಧೆಯಿಂದ ಗ್ರಹಣ ವ್ರತ ಕೈಗೊಳ್ಳುತ್ತಾರೆ. ಯಾವ ರಾಶಿ, ನಕ್ಷತ್ರದವರಿಗೆ ಗ್ರಹಣ ದೋಷವಿದೆ ನೋಡೋಣ.
 

ಗ್ರಹಣ ಸ್ಪರ್ಶವಾಗುವುದು 5.19 ಕ್ಕೆ. ಚಂದ್ರೋದಯ ಸಂಜೆ 6.28 ಕ್ಕೆ. 7.02 ಕ್ಕೆ ಪೂರ್ಣ ಗ್ರಹಣ. ಗ್ರಹಣ ಮೋಕ್ಷ ಕಾಲ ರಾತ್ರಿ 8.44ಕ್ಕೆ. ಹೀಗಾಗಿ ಮಧ್ಯಾಹ್ನದ ಮೊದಲು ಭೋಜನ ಕೈಗೊಳ್ಳಬೇಕು. ರಾತ್ರಿ ಗ್ರಹಣ ಮೋಕ್ಷವಾದ ಬಳಿಕ ಸ್ನಾನ ಮಾಡಿ ಭೋಜನ ಸ್ವೀಕರಿಸಬಹುದು.

ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ ಕರ್ಕಟಕ ರಾಶಿಯಲ್ಲಿ ಚಂದ್ರನಿಗೆ ಇಂದು ರಾಹು ಗ್ರಹಣ. ಹಾಗಾಗಿ ಪುಷ್ಯ, ಆಶ್ಲೇಷ ನಕ್ಷತ್ರ, ಕರ್ಕಟಕ ರಾಶಿಯವರಿಗೆ ದೋಷವಿದೆ. ಹಾಗೆಯೇ ಸಿಂಹ, ಧನು, ಕುಂಭ ರಾಶಿಯವರಿಗೂ ಅರಿಷ್ಠ. ಈ ರಾಶಿ ಮತ್ತು ನಕ್ಷತ್ರದವರು ವ್ರತ ಕೈಗೊಂಡು ವಿಶೇಷ ಪೂಜೆ ಮಾಡಿದರೆ ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ