ಇಂದು ವೈಕುಂಠ ಏಕಾದಶಿ: ಈ ಐದು ಕೆಲಸಗಳನ್ನು ನೀವು ಮಾಡಿದರೆ ಸ್ವರ್ಗ ಪ್ರಾಪ್ತಿ!

ಮಂಗಳವಾರ, 18 ಡಿಸೆಂಬರ್ 2018 (09:07 IST)
ಬೆಂಗಳೂರು: ಇಂದು ವೈಕುಂಠ ಏಕಾದಶಿ. ಹೀಗಾಗಿ ಭಕ್ತರು ಬೆಳಿಗ್ಗಿನಿಂದಲೇ ವೆಂಕಟರಮಣನ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅದರ ಜತೆಗೆ ಈ ಐದು ಕೆಲಸಗಳನ್ನು ಮಾಡಿದರೆ ಉತ್ತಮ.


ಹರೇ ರಾಮ ಎನ್ನಿ
ಇಂದು ಬೆಳಗ್ಗೆಯೇ ಸ್ನಾನ ಮಾಡಿ ಶುದ್ಧ ಬಟ್ಟೆಯುಟ್ಟು ಕೆಲ ಕಾಲ ಹರೇ ರಾಮ ಹರೇ ಕೃಷ್ಣ ಎಂದು ಮಹಾವಿಷ್ಣುವಿನ ಧ್ಯಾನ ಮಾಡಿ.

ಭಗವದ್ಗೀತೆ
ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥ. ಇಂದು ಭಗವದ್ಗೀತೆಯ ಯಾವುದಾದರೂ ಒಂದು ಅಧ್ಯಾಯವನ್ನು ಭಕ್ತಿಯಿಂದ ಪಾರಾಯಣ ಮಾಡಿದರೆ ಉತ್ತಮ.

ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ
ಮಹಾವಿಷ್ಣು ಅಥವಾ ವೆಂಕಟರಮಣನ ದೇವಾಲಯಗಳಿಗೆ ಭೇಟಿ ಕೊಟ್ಟು, ಅಲ್ಲಿ ವೈಕುಂಠದ ಬಾಗಿಲು ದಾಟಿ ದೇವರಿಗೆ ನಮಸ್ಕರಿಸಿದರೆ ಒಳಿತಾಗುತ್ತದೆ.

ಉಪವಾಸ
ಏಕಾದಶಿ ಇರುವುದರಿಂದ ಉಪವಾಸವಿದ್ದು, ದೇವರ ಧ್ಯಾನ ಮಾಡಿದರೆ ಉತ್ತಮ.

ಮಹಾವಿಷ್ಣುವಿನ ಸೇವೆ
ಮಹಾವಿಷ್ಣುವಿನ ದೇವಾಲಯಕ್ಕೆ ತೆರಳಿ ಯಾವುದಾದರೊಂದು ವಿಶೇಷ ಪೂಜೆ ಸಲ್ಲಿಸುವುದು, ವಿಷ್ಣು ಸಹಸ್ರನಾಮ ಪಠಿಸುವುದರಿಂದ ಒಳಿತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ