ಆಷಾಢ ಶುಕ್ರವಾರ ಚಾಮುಂಡಿ ತಾಯಿಗೆ ವಿಶೇಷ ಯಾಕೆ

Krishnaveni K

ಶುಕ್ರವಾರ, 12 ಜುಲೈ 2024 (08:42 IST)
ಬೆಂಗಳೂರು: ಇಂದು ಆಷಾಢ ಶುಕ್ರವಾರದ ಶುಭದಿನವಾಗಿದ್ದು, ನಾಡದೇವಿ ಚಾಮುಂಡಿ ದೇವಿಯ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ. ಆಷಾಢ ಶುಕ್ರವಾರವೆಂದರೆ ಚಾಮುಂಡಿ ತಾಯಿಗೆ ವಿಶೇಷ ಯಾಕೆ ನೋಡಿ.

ಆಷಾಢ ಮಾಸದ ಮೊದಲ ಶುಕ್ರವಾರವನ್ನು ಆಷಾಢ ಶುಕ್ರವಾರವೆಂದು ಆಚರಿಸಲಾಗುತ್ತದೆ. ಈ ದಿನ ಮೈಸೂರಿನ ಚಾಮುಂಡಿ ದೇವತೆಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಜಯಂತಿ ಅಂದರೆ ಜನ್ಮ ದಿನವಾಗಿದೆ.

ಹೀಗಾಗಿ ಇಂದು ಚಾಮುಂಡಿ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆಷಾಢ ಶುಕ್ರವಾರದಂದು ದೇವಿಯ ದರ್ಶನ ಪಡೆದರೆ ವಿಶೇಷವೆಂದೇ ಪರಿಗಣಿಸಲಾಗಿದೆ. ಆಷಾಢ ಮಾಸದಲ್ಲಿ ಬರುವ ಎಲ್ಲಾ ಶುಕ್ರವಾರವೂ ಶುಭ ದಿನವೇ. ಆದರೆ ಮೊದಲ ಶುಕ್ರವಾರ ವಿಶೇಷವಾಗಿದೆ.

ಈ ದಿನ ಚಾಮುಂಡಿ ತಾಯಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ವಿಶೇಷ ಮಂತ್ರ ಘೋಷಗಳ ಮೂಲಕ ಪೂಜೆ ನಡೆಯುತ್ತದೆ. ಈ ದಿನ ದೇವಿಯ ಮುಂದೆ ನಿಂತು ಯಾವುದೇ ಬೇಡಿಕೆ ಇಟ್ಟರೂ ದೇವಿ ನೆರವೇರಿಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಸಾಕಷ್ಟು ಜನ ಸಾರ್ವಜನಿಕರು ಮಾತ್ರವಲ್ಲ, ವಿಐಪಿಗಳೂ ಬಂದು ಇಂದು ಚಾಮುಂಡಿ ತಾಯಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ