ಮುಂಬೈ : ಅಕ್ಟೋಬರ್ 28ರಂದು ಮುಂಬೈ ಹೈಕೋರ್ಟ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದೇಶವೊಂದನ್ನು ಹೊರಡಿಸಿದೆ.
ಡ್ರಗ್ಸ್ ಕೇಸ್ ಸಂಬಂಧಪಟ್ಟಂತೆ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ ವಾಟ್ಸಪ್ ಚಾಟ್ ಸಲ್ಲಿಸಲಾಗಿತ್ತು. ಆದರೆ ಆ ವಾಟ್ಸಾಪ್ ಚಾಟ್ನಲ್ಲಿ ಆಕ್ಷೇಪಾರ್ಹ ವಿಚಾರಗಳು ಇಲ್ಲ ಎಂದು ಕೋರ್ಟ್ ಹೇಳಿದೆ.
ಸೆಕ್ಷನ್ 29 ಅಡಿಯಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ನಡುವೆ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶ ನಿತಿನ್ ಸಾಂಬ್ರೆ ಹೇಳುವಂತೆ, "ಆರ್ಯನ್ ಖಾನ್ ಅವರ ಫೋನ್ನಿಂದ ಹೊರತೆಗೆಯಲಾದ ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಿದ ನಂತರ, ಆರ್ಯನ್ ಖಾನ್ ಮತ್ತು ಅರ್ಬಾಜ್, ಎಲ್ಲಾ ಮೂವರು ಅರ್ಜಿದಾರರು ಮತ್ತು ಇತರ ಆರೋಪಿಗಳು ಒಪ್ಪಂದದ ಮನಸ್ಸಿನಲ್ಲಿ ಸಭೆ ನಡೆಸಿದ್ದಾರೆ, ಅಪರಾಧ ಮಾಡುವ ಸಂಚು ರೂಪಿಸಿದ್ದಾರೆ ಎಂದು ಸೂಚಿಸಲು ಆಕ್ಷೇಪಾರ್ಹವಾದ ಯಾವ ಮಾಹಿತಿಯೂ ಇಲ್ಲಿಲ್ಲ" ಎಂದಿದ್ದಾರೆ.