ಸಿಲ್ಕ್ ಸ್ಯಾರಿ ಉಟ್ಟು ಸಿದ್ಧಿವಿನಾಯಕನ ಸನ್ನಿಧಿಗೆ ಭೇಟಿ ಕೊಟ್ಟ ದೀಪಿಕಾ ಪಡುಕೋಣೆ

Krishnaveni K

ಶನಿವಾರ, 7 ಸೆಪ್ಟಂಬರ್ 2024 (11:43 IST)
Photo Credit: X
ಮುಂಬೈ: ಗಣೇಶ ಹಬ್ಬ ಹಿನ್ನಲೆಯಲ್ಲಿ ಸದ್ಯದಲ್ಲೇ ತಾಯಿಯಾಗಲಿರುವ ನಟಿ ದೀಪಿಕಾ ಪಡುಕೋಣೆ ಮತ್ತು ಪತಿ ರಣವೀರ್ ಸಿಂಗ್ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ಇದೇ ತಿಂಗಳು ದೀಪಿಕಾ ಪಡುಕೋಣೆ ಹೆರಿಗೆಯಾಗಲಿದೆ. ಆದರೆ ಇದಕ್ಕೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅವರು ಗರ್ಭಿಣಿ ಎನ್ನುವುದರ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ದೀಪಿಕಾ ಹೊಟ್ಟೆ ದಪ್ಪ ಕಾಣುವಂತೆ ನಾಟಕ ಮಾಡುತ್ತಿದ್ದಾರೆ ಎಂದವರು ಇದ್ದಾರೆ.

ಆದರೆ ಇಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಡುವಾಗ ದೀಪಿಕಾ ಉಬ್ಬು ಹೊಟ್ಟೆ ಎಲ್ಲರಿಗೂ ಕಾಣುವಂತಿತ್ತು. ಇದನ್ನು ನೋಡಿ ಆಕೆಯ ಪ್ರೆಗ್ನೆನ್ಸಿ ಬಗ್ಗೆಯೇ ಅನುಮಾನ ಪಟ್ಟವರು ಎಲ್ಲಿದ್ದಾರೆ ಎಂದು ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.

ಪಕ್ಕಾ ಸಾಂಪ್ರದಾಯಿಕ ಸಿಲ್ಕ್ ಸೀರೆ ಉಟ್ಟುಕೊಂಡು ದೀಪಿಕಾ ಕಂಗೊಳಿಸುತ್ತಿದ್ದರೆ, ಇತ್ತ ರಣವೀರ್ ಸಿಂಗ್ ಕೂಡಾ ಸಾಂಪ್ರದಾಯಿ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಗಣೇಶ ಹಬ್ಬದ ಹಿನ್ನಲೆಯಲ್ಲಿ ದೀಪಿಕಾ ದಂಪತಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ