ಬಾಯ್ಕಾಟ್ ಲಾಲ್ ಸಿಂಗ್ ಛಡ್ಡಾ ಅಭಿಯಾನ: ಇದಕ್ಕೆಲ್ಲಾ ಕ್ಯಾರೇ ಮಾಡಬಾರದು ಎಂದ ಕರೀನಾ

ಬುಧವಾರ, 3 ಆಗಸ್ಟ್ 2022 (08:40 IST)
ಮುಂಬೈ: ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದು ಈ ನಡುವೆ ಅಮೀರ್ ಈ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ವಾತಾವರಣವಿದೆ ಎಂದಿದ್ದ ಮಾತನ್ನು ಉಲ್ಲೇಖಿಸಿ ಸಿನಿಮಾ ಬಹಿಷ್ಕರಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ಕೊಡಲಾಗುತ್ತಿದೆ.

ಕೆಲವು ನೆಟ್ಟಿಗರು ಅಮೀರ್ ಖಾನ್ ರ  ಹಳೆಯ ಹೇಳಿಕೆಗಳಿಗೆ ಪ್ರತಿಯಾಗಿ ಈಗ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಹಿಷ್ಕರಿಸಿ ಎಂದು ಟ್ರೆಂಡ್ ಮಾಡಿದ್ದಾರೆ. ಇದರ ಬಗ್ಗೆ ಸ್ವತಃ ಅಮೀರ್ ಪ್ರತಿಕ್ರಿಯಿಸಿ ನಾನು ಭಾರತ ವಿರೋಧಿ ಎಂದು ತಪ್ಪು ಕಲ್ಪನೆ ಇದೆ. ಆದರೆ ಹಾಗಲ್ಲ, ಸಿನಿಮಾ ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದ್ದರು. ಆದರೂ ನೆಟ್ಟಿಗರು ಟ್ರೆಂಡ್ ಮಾಡುವುದನ್ನು ನಿಲ್ಲಿಸಿಲ್ಲ.

ಈ ಬಗ್ಗೆ ನಟಿ ಕರೀನಾ ಪ್ರತಿಕ್ರಿಯಿಸಿದ್ದು, ‘ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಹಲವು ವೇದಿಕೆಗಳಿವೆ. ಒಂದು ವೇಳೆ ಅದು ಈ ರೀತಿಯಾಗಿದ್ದಲ್ಲಿ, ಅದಕ್ಕೆ ಕ್ಯಾರೇ ಎನ್ನುವ ಅಗತ್ಯವಿಲ್ಲ. ನಾನಂತೂ ಇದನ್ನು ಗಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ