ನಯನತಾರಾ ಬರ್ತ್ಡೇಗೆ ಸಿಕ್ತು 3 ಕೋಟಿ ರೂ ಕಾರು
ನಟಿ ನಯನತಾರಾ ಅವರು ನವೆಂಬರ್ 18ರಂದು ಬರ್ತ್ಡೇ ಆಚರಿಸಿಕೊಂಡರು. ಈ ವೇಳೆ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬಂತು. ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ಸಿಕ್ಕಿದೆ.
ಈ ವಿಚಾರವನ್ನು ಅವರು ಎರಡು ವಾರ ತಡವಾಗಿ ರಿವೀಲ್ ಮಾಡಿದ್ದು, ನಯನತಾರಾ ಬರ್ತ್ಡೇಗೆ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ ಕಾರನ್ನು ಪತಿ ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದು,ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.