ನನ್ನ ಹಾಟ್ ಫೋಟೋ ನೋಡಿದ್ರೆ ಜನ ಜಾಸ್ತಿ ಕಾಮೆಂಟ್ ಮಾಡ್ತಾರೆ ಎಂದ ನೀನಾ ಗುಪ್ತಾ

ಗುರುವಾರ, 27 ಜೂನ್ 2019 (09:51 IST)
ಮುಂಬೈ: ನೀನಾ ಗುಪ್ತಾ ಎಂಬ ನಟಿಗೆ ವಯಸ್ಸಾಗುತ್ತಿರಬಹುದು. ಆದರೆ ಆ ಹಳೆಯ ಚಾರ್ಮ್ ಮಾತ್ರ ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದನ್ನು ಅವರ ಮಾತಿನಲ್ಲೇ ತಿಳಿದುಕೊಳ್ಳಬಹುದು.


ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೀನಾ ತಮ್ಮ ಹಾಟ್ ಫೋಟೋಗಳಿಗೆ ಈಗಲೂ ಜನ ಹೇಗೆ ಫಿದಾ ಆಗ್ತಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅದಕ್ಕೆ ತಮ್ಮ ಸುಂದರ ದೇಹವೇ ಕಾರಣ ಎಂದು ಹೊಗಳಿಕೊಂಡಿದ್ದಾರೆ.

‘ನನ್ನ ಗ್ಲಾಮರಸ್ ಫೋಟೋಗಳನ್ನು ನೋಡಿ ಇನ್ನು ಯಾರೂ ಸಣ್ಣ ಯುವತಿಯ ಪಾತ್ರ ಕೊಡಲ್ಲ. ಹಾಗಿದ್ದರೂ ನನ್ನ ಹಾಟ್ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಜನ ಹೆಚ್ಚು ಕಾಮೆಂಟ್, ಲೈಕ್ಸ್ ಕೊಡುತ್ತಾರೆ. ಅದಕ್ಕೆ ನನ್ನ ಸುಂದರ ದೇಹವೇ ಕಾರಣ. ಆದರೆ ಯಾರೂ ನೆಗೆಟಿವ್ ಕಾಮೆಂಟ್ ಹಾಕಲ್ಲ. ಎಲ್ಲರೂ ನನ್ನ ದೇಹ ಸಿರಿಯನ್ನು ಹೊಗಳುತ್ತಾರೆ’ ಎಂದು ನೀನಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ