ಆತ್ಮಹತ್ಯೆಗೆ ಶರಣಾದ ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅನುರಾಗ್ ವಿನೀಲ್

ಶನಿವಾರ, 16 ಜೂನ್ 2018 (09:22 IST)
ಹೈದರಾಬಾದ್ : ಟಾಲಿವುಡ್ ನ ಉದಯೋನ್ಮುಖ ಸಂಗೀತ ನಿರ್ದೇಶಕ ಅನುರಾಗ್ ವಿನೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.


ಒಂದು ವಾರದ ಹಿಂದೆ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನುರಾಗ್ ವಿನೀಲ್ ಅವರು ಹೈದರಾಬಾದ್ ನ ಮಮತಾ ನಗರದಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದು, ನೆರೆ ಮನೆಯವರಿಂದ ಇವರು ಕಿರುಕುಳ ಅನುಭವಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಇವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.


ಸಂಗೀತ ನಿರ್ದೇಶಕ ಅನುರಾಗ್ ವಿನೀಲ್ ಅವರು ಹಲವು ಆಲ್ಬಂಗಳಿಗೆ ಮತ್ತು ಕಿರುಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ