ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಸೋಮವಾರ, 9 ಜುಲೈ 2018 (18:57 IST)
ಚೆನ್ನೈ : ತಮಿಳು ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಪೋಸ್ಟರ್ ವಿರುದ್ಧ ತಮಿಳುನಾಡು ಆರೋಗ್ಯ ಇಲಾಖೆ ನೋಟಿಸು ಜಾರಿ ಮಾಡಿದೆ.


ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಪೋಸ್ಟರ್ ವಿಜಯ್ ಬರ್ತ್​ಡೇ ದಿನದಂದು ಬಿಡುಗಡೆ ಮಾಡಿದ್ದು, ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಆದರೆ ಈ ಪೋಸ್ಟರ್ ನಲ್ಲಿ ವಿಜಯ್ ಅವರು ಸಿಗರೇಟ್ ಸೇದುತ್ತಿರುವ ಫೋಟೋ ಇದ್ದುದ್ದರಿಂದ ತಮಿಳುನಾಡು ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಪೋಸ್ಟರನ್ನು ಎಲ್ಲಾ ಸಾಮಾಜಿಕ ಜಾಲತಾಣದಿಂದಲೂ ತೆಗೆಯಬೇಕೆಂದು ಇಲ್ಲವಾದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಟನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.


ಪೋಸ್ಟರ್ ಬಿಡುಗಡೆಯಾದ ಕೆಲದಿನಗಳಲ್ಲೇ ತಮಿಳುನಾಡಿನ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಪೋಸ್ಟರ್​ ಧೂಮಪಾನವನ್ನು ಉತ್ತೇಜಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ