ಮನೆ ಎಲ್ಲಿ ಎಂದೇ ಮರೆತು ಹೋಗಿದೆ!

ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಆಗ ಅಲ್ಲಿಗೆ ಬಂದ ಒಬ್ಬ ಯುವಕ ಏನ್ರಿ ಸಾರ್‌ ನಿಮಗೆ ಏನಾದರೂ ತೊಂದರೆಯೆ? ನಿಮಗೇನಾದರೂ ಸಹಾಯ ಬೇಕೆ ಎಂದು ಕೇಳಿದ

ಅವರು ಇಲ್ಲಾ ಎಲ್ಲಾ ಚೆನ್ನಾಗಿಯೇ ಇದೆ. ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ...

ಹಾಗಿದ್ದರೆ ಇನ್ನೇನು ಸಾರ್ ನಿಮ್ಮ ಸಮಸ್ಯೆ ಎಂದು ಆಶ್ಚರ್ಯದಿಂದ ಯುವಕ ಕೇಳಿದಾಗ , ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ ಎಂದು ಮತ್ತೆ ಅಳಲು ಪ್ರಾರಂಭಿಸಿದರು.

ವೆಬ್ದುನಿಯಾವನ್ನು ಓದಿ