ಕೊರೋನಾಗೂ ರಕ್ತ ಹೆಪ್ಪುಗಟ್ಟುವಿಕೆಗೂ ಇದೆ ಸಂಬಂಧ!

ಗುರುವಾರ, 19 ಆಗಸ್ಟ್ 2021 (12:41 IST)
ಲಂಡನ್: ದೀರ್ಘ ಕಾಲದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಬೇರೆ ಬೇರೆ ರೀತಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಬಗ್ಗೆ ಈ ಹಿಂದೆಯೂ ಓದಿದ್ದೇವೆ. ಇದೀಗ ಲಂಡನ್ ಮೂಲದ ಸಂಶೋಧಕರು ಹೊಸ ವಿಚಾರವನ್ನು ಹೇಳಿದ್ದಾರೆ.


ಸುದೀರ್ಘ ಕಾಲದ ಕೊರೋನಾದಿಂದ ಬಳಲುತ್ತಿರುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ರಕ್ತ ಹೆಪ್ಪುಗಟ್ಟುವಿಕೆ ಮಾತ್ರವಲ್ಲದೆ, ದೈಹಿಕ ಸಾಮರ್ಥ್ಯ ಕುಸಿಯುವುದು, ಸುಸ್ತಾಗುವುದು ಇತ್ಯಾದಿ ಸಮಸ್ಯೆ ಕಾಣಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವಾರಕ್ಕಿಂತ ಹೆಚ್ಚು ಅಥವಾ ತಿಂಗಳವರೆಗೆ ಕೊರೋನಾ ವಾಸಿಯಾಗದೇ ಇರುವವರಲ್ಲಿ ಇಂತಹ ಅಪಾಯವಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ