ಕೊತ್ತಂಬರಿ ಸೊಪ್ಪು ರುಚಿಗಷ್ಟೇ ಎಂಬ ಭ್ರಮೆಯಲ್ಲಿದ್ದರೆ ಇಂದೇ ಹೊರ ಬನ್ನಿ; ಆರೋಗ್ಯಕರ ಅನುಕೂಲದ ಬಗ್ಗೆ ತಿಳಿಯಿರಿ

ಬುಧವಾರ, 18 ಆಗಸ್ಟ್ 2021 (10:32 IST)
ಕೊತ್ತಂಬರಿ ಸೊಪ್ಪಿನ ರಸವನ್ನು ತೆಗೆದುಕೊಂಡು ಅದೇ ಪ್ರಮಾಣದಲ್ಲಿ ಜೇನುತುಪ್ಪದೊಂದಿಗೆ ಬೆರೆಸಿ ಮಲಗುವ ಮುನ್ನ ಸೇವಿಸಿದರೆ ವಿಟಮಿನ್ ಎ, ಬಿ 1, ಬಿ 2, ಸಿ ಮತ್ತು ಕಬ್ಬಿಣದ ಕೊರತೆಯನ್ನು ದೂರ ಮಾಡಬಹುದು.

ಸಾಮಾನ್ಯವಾಗಿ ನಾವು ಮಾಡುವ ಅಡುಗೆಯ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು(Coriander Leaves) ಕೊತ್ತಂಬರಿ ಸೊಪ್ಪು ಬಳಸುತ್ತೇವೆ. ಆದರೆ ರುಚಿ ಮಾತ್ರ ಅಲ್ಲ ಇದರಿಂದ ಹಲವು ಆರೋಗ್ಯಕರ ಲಾಭಗಳಿವೆ. ಅದರಲ್ಲೂ ಮುಖ್ಯವಾಗಿ ಕೊತ್ತಂಬರಿ ಸೊಪ್ಪಿನಿಂದ ಚರ್ಮದ ಸಮಸ್ಯೆಗಳನ್ನು ಪರಿಶೀಲಿಸಬಹುದು. ಇದು ಚರ್ಮವನ್ನು ಕಾಂತಿಯುತವಾಗಿಸುವುದಲ್ಲದೆ, ಮೊಡವೆ, ಒಣ ಚರ್ಮ ಮತ್ತು ಕಪ್ಪು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೊತ್ತಂಬರಿ ಸೊಪ್ಪಿನಿಂದ ಕೂದಲಿನ ಸಮಸ್ಯೆಗಳನ್ನು ಸಹ ನಿಯಂತ್ರಿಸಬಹುದು. ಕೊತ್ತಂಬರಿ ಸೊಪ್ಪನ್ನು ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಕೆಳಕಂಡ ಮಾರ್ಗ ಅನುಸರಿಸಿ ಉಪಯೋಗಿಸಿ.
ಕೊತ್ತಂಬರಿ ಸೊಪ್ಪು, ಜೇನುತುಪ್ಪ, ಹಾಲು, ನಿಂಬೆ ರಸ

ಚರ್ಮದ ಕಾಂತಿ ಹೆಚ್ಚಿಸಲು ಕೊತ್ತಂಬರಿ ಸೊಪ್ಪು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ, ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ.
ಕೊತ್ತಂಬರಿ ಸೊಪ್ಪು, ಅಕ್ಕಿ, ಮೊಸರು
ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ ನಂತರ ಮೃದುವಾದ ಪೇಸ್ಟ್ ತಯಾರಿಸಿ. ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಒಂದು ಚಮಚ ಮೊಸರನ್ನು ಮಿಶ್ರಣ ಮಾಡಿ. ನಂತರ ಅದನ್ನು ಫೇಸ್ ಪ್ಯಾಕ್ನಂತೆ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಸ್ನಾಯುಗಳು ಮತ್ತು ಕೋಶಗಳು ಆರೋಗ್ಯವಾಗಿರುತ್ತದೆ
ಕೊತ್ತಂಬರಿ ಸೊಪ್ಪು, ನಿಂಬೆ ರಸ
ಕೊತ್ತಂಬರಿ ಸೊಪ್ಪನ್ನು ತೊಳೆದು ನುಣ್ಣಗೆ ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ನಂತರ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇಪ್ಪತ್ತೈದು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಅಲ್ಲದೆ ಚರ್ಮವು ಮೃದುವಾಗುತ್ತದೆ. ಮೊಡವೆಗಳು ಮತ್ತು ಕಲೆಗಳನ್ನು ಇದು ತೆಗೆದುಹಾಕುತ್ತದೆ.
ಕೊತ್ತಂಬರಿ ಸೊಪ್ಪು, ಅಲೋವೆರಾ ಜೆಲ್
ಕೊತ್ತಂಬರಿ ಸೊಪ್ಪನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಿ. ಒಂದು ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು ಇಪ್ಪತ್ತು ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ನಾರಿನಂಶ ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ಇದು ಕಡಿಮೆ ಕ್ಯಾಲೋರಿ ಹೊಂದಿದೆ. ಜತೆಗೆ ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿರುವುದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ. ಇದು ಪ್ರೋಟೀನ್ಗಳು, ಕ್ಯಾಲ್ಸಿಯಂ, ರಂಜಕ, ಆಕ್ಸಲಿಕ್ ಆಮ್ಲಗಳು, ಪೊಟ್ಯಾಸಿಯಮ್, ಕಬ್ಬಿಣ, ಸೋಡಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಕೊತ್ತಂಬರಿ ಸೊಪ್ಪನ್ನು ರುಚಿಗೆ ಮಾತ್ರವಲ್ಲದೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ನೀವು ಕೊತ್ತಂಬರಿ ಸೊಪ್ಪಿನ ರಸವನ್ನು ತೆಗೆದುಕೊಂಡು ಅದೇ ಪ್ರಮಾಣದಲ್ಲಿ ಜೇನುತುಪ್ಪದೊಂದಿಗೆ ಬೆರೆಸಿ ಮಲಗುವ ಮುನ್ನ ಸೇವಿಸಿದರೆ ವಿಟಮಿನ್ ಎ, ಬಿ 1, ಬಿ 2, ಸಿ ಮತ್ತು ಕಬ್ಬಿಣದ ಕೊರತೆಯನ್ನು ದೂರ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ