ಕೊರೊನಾ ಎಫೆಕ್ಟ್ ; ಕರ್ನಾಟಕ – ಗೋವಾ ಗಡಿ ಬಂದ್

ಭಾನುವಾರ, 22 ಮಾರ್ಚ್ 2020 (16:28 IST)
ಕೋವಿಡ್ -19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಧ್ಯದಲ್ಲಿಯೇ ಗೋವಾ ಗಡಿ ಬಂದ್ ಆಗಲಿದೆ.

 ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸುಮಾರು ಆರು ತನಿಖಾ ಠಾಣೆಗಳನ್ನು ಕೊರೊನಾ ವೈರಸ್ ಪತ್ತೆಗೆ ಸ್ಥಾಪನೆ ಮಾಡಲಾಗಿದೆ.  ಪ್ರವಾಸಿ ಸ್ಥಳಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ನಿಯೋಜಿಸಲಾಗಿದೆ.

ಟಿಬೇಟಿಯನ್ ಕಾಲೋನಿಯ ಪ್ರದೇಶದಲ್ಲಿ 144 ಕಲಂ ನಿಷೇಧಾಜ್ಞೆ ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನು ಉತ್ತರ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ.

ಅಗತ್ಯ ಬಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರವಾರದ ಮಾಜಾಳಿ ಬಳಿ ಇರುವ ಕರ್ನಾಟಕ - ಗೋವಾ ಗಡಿಯನ್ನು ಬಂದ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ತಿಳಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ