ಉಚಿತ ಆಹಾರ ಕೊಡುತ್ತಾರೆಂದು ಹಿಂದೆ ಮುಂದೆ ನೋಡದೇ ಕೈ ಚಾಚಬೇಡಿ!
ಬುಧವಾರ, 22 ಏಪ್ರಿಲ್ 2020 (09:05 IST)
ಬೆಂಗಳೂರು: ಲಾಕ್ ಡೌನ್ ಆದ ಬಳಿಕ ಹಲವರು ಸಮಾಜ ಸೇವಕರಾಗಿದ್ದಾರೆ. ತಾವೇ ಆಹಾರ ತಯಾರಿಸಿ ಬಡವರಿಗೆ ಹಂಚುವ ಕೆಲಸವನ್ನು ಕೆಲವರು ನಿಷ್ಠೆಯಿಂದ ಮಾಡಿದರೆ ಮತ್ತೆ ಕೆಲವರು ಪ್ರಚಾರಕ್ಕಾಗಿಯೋ ವೈಯಕ್ತಿಕ ಹಿತಕ್ಕಾಗಿಯೋ ಮಾಡುತ್ತಿದ್ದಾರೆ. ಒಟ್ಟಾರೆ ಆಹಾರ, ಸಾಮಗ್ರಿ ಹಂಚುವುದು ಕೆಲವರಿಗೆ ಫ್ಯಾಶನ್ ಆಗಿಬಿಟ್ಟಿದೆ.
ಉಚಿತ ಸಿಗುತ್ತದೆ ಎಂದರೆ ನಾವು ಹಿಂದೆ ಮುಂದೆ ನೋಡದೇ ಕ್ಯೂ ನಿಂತು ಪಡೆಯುವುದು ಸಹಜ. ಆದರೆ ಈ ರೀತಿ ಮಾಡಿ ಇಲ್ಲದ ಅಪಾಯವನ್ನು ಮೈಮೇಲೆಳೆದುಕೊಳ್ಳಬೇಡಿ.
ಆಹಾರ ನೀಡುವವರು ಯಾರು, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಅಷ್ಟೇ ಅಲ್ಲ, ಉಚಿತ ಎಂದ ತಕ್ಷಣವೇ ಜನರು ಗುಂಪು ಸೇರುವುದು ಸಾಮಾನ್ಯ. ಈ ಸಮಯದಲ್ಲಿ ಸಾಮಾಜಿಕ ಅಂತರವೂ ನೆನಪಿಗೆ ಬರುವುದಿಲ್ಲ. ಇದೆಲ್ಲಾ ಅಪಾಯವನ್ನು ಮೈಮೇಲೆಳೆದುಕೊಂಡಂತೆ. ಈ ರೀತಿ ಮಾಡಲು ಹೋಗಿ ವೈರಸ್ ತಗುಲಿಸಿಕೊಂಡ ಉದಾಹರಣೆಗಳೂ ನಡೆದಿದೆ. ಹಾಗಾಗಿ ಉಚಿತ ಕೊಡುತ್ತಾರೆಂದ ತಕ್ಷಣ ಮೈಮರೆತು ಕೈ ಚಾಚಲು ಹೋಗಬೇಡಿ.