ನವದೆಹಲಿ: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ನ ಎಲ್ಲಾ 10 ವಿಕೆಟ್ ಗಳನ್ನು ಪಡೆದ ನ್ಯೂಜಿಲೆಂಡ್ ಸ್ಪಿನ್ನರ್ ಆಜಾಝ್ ಪಟೇಲ್ ಈಗ ತಮ್ಮ ಜರ್ಸಿಯನ್ನು ಹರಾಜಿಗಿಟ್ಟಿದ್ದಾರೆ.
ಈ ಐತಿಹಾಸಿಕ ಸಾಧನೆ ಮೂಲಕ ಆಜಾಝ್ ಪಟೇಲ್ ಜಿಮ್ ಲೇಕರ್, ಅನಿಲ್ ಕುಂಬ್ಳೆ ಬಳಿಕ ಮೂರನೆಯ ಸಾಧಕರಾಗಿದ್ದರು.
ಇದೀಗ ಆ ಪಂದ್ಯದಲ್ಲಿ ತೊಟ್ಟಿದ್ದ ಜರ್ಸಿಯನ್ನು ಮಕ್ಕಳ ಆಸ್ಪತ್ರೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಹರಾಜಿಗಿಡಲು ತೀರ್ಮಾನಿಸಿದ್ದಾರೆ.