ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಅಲೆಸ್ಟರ್ ಕುಕ್
ಅಂತಿಮ ಪಂದ್ಯವಾಡುತ್ತಿರುವ ಅಲೆಸ್ಟರ್ ಕುಕ್ ಶತಕ (103) ಸಿಡಿಸಿ ಕೊನೆಯ ಇನಿಂಗ್ಸ್ ನ್ನು ಸ್ಮರಣೀಯವಾಗಿಸಿದರು. ಅಷ್ಟೇ ಅಲ್ಲದೆ, ದ್ವಿತೀಯ ಇನಿಂಗ್ಸ್ ನಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಕುಮಾರ್ ಸಂಗಕ್ಕಾರ ದಾಖಲೆಯನ್ನು ಮುರಿದರು. ಕುಕ್ ದ್ವಿತೀಯ ಇನಿಂಗ್ಸ್ ಶತಕದ ಸಂಖ್ಯೆ ಇದೀಗ 15 ಕ್ಕೇರಿದೆ.
ಕುಕ್ ಗೆ ತಕ್ಕ ಸಾಥ್ ನೀಡಿರುವ ನಾಯಕ ಜೋ ರೂಟ್ ಕೂಡಾ 93 ರನ್ ಗಳಿಸಿದ್ದು ಶತಕದ ಹಾದಿಯಲ್ಲಿದ್ದಾರೆ. ಈ ಇಬ್ಬರೂ ಆಟಗಾರರೂ ಟೀಂ ಇಂಡಿಯಾ ಬೌಲರ್ ಗಳನ್ನು ಅಕ್ಷರಶಃ ಬೆವರಿಳಿಸಿದರು. ಇದರಿಂದಾಗಿ ಇಂಗ್ಲೆಂಡ್ ಮುನ್ನಡೆ 283 ರನ್ ಗೆ ಏರಿಕೆಯಾಗಿದೆ. ಈ ಜೋಡಿ ಟೀಂ ಇಂಡಿಯಾಕ್ಕೆ ಕಂಟಕವಾಗುವ ಎಲ್ಲಾ ಲಕ್ಷಣಗಳೂ ತೋರುತ್ತಿವೆ.