ಮತ್ತೆ ಶುರುವಾಯ್ತು ಸಿಎಸ್ ಕೆ ಟೀಂ-ರವೀಂದ್ರ ಜಡೇಜಾ ನಡುವೆ ಕಿರಿಕ್!
ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ನಾಯಕ ಧೋನಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಪಂದ್ಯ ಮುಗಿದ ಬಳಿಕ ಇಬ್ಬರ ನಡುವೆ ಮಾತುಕತೆ ನಡೆದಿದೆ. ಇದಾದ ಬಳಿಕ ಜಡೇಜಾ ತೀರಾ ಹತಾಶರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಿಟ್ಟಿನಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕರ್ಮ ಮರಳಿ ಬರುತ್ತದೆ. ಅದು ತಡವಾಗಬಹುದು, ಆದರೆ ಬರದೇ ಬಿಡಲ್ಲ ಎಂದು ಪೋಸ್ಟ್ ಬರೆದುಕೊಂಡಿದ್ದರು. ಇದನ್ನು ಅವರ ಪತ್ನಿ ಕೂಡಾ ಶೇರ್ ಮಾಢಿದ್ದಾರೆ.
ಇದರ ಬೆನ್ನಲ್ಲೇ ಜಡೇಜಾ ಮತ್ತು ಧೋನಿ ನಡುವೆ ಮತ್ತೆ ಭಿನ್ನಾಭಿಪ್ರಾಯವಾಗಿದೆ ಎಂಬ ಮಾತು ಕೇಳಿಬಂದಿದೆ. ಕಳೆದ ಐಪಿಎಲ್ ಸೀಸನ್ ಮುಗಿದ ಬಳಿಕ ಜಡೇಜಾ ತಂಡ ಬಿಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಬಳಿಕ ಜಡೇಜಾ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು. ಕಳೆದ ಸೀಸನ್ ನಲ್ಲಿ ಜಡೇಜಾರನ್ನು ನಾಯಕರಾಗಿ ಮಾಡಲಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಅವರಿಂದ ನಾಯಕತ್ವ ಕಿತ್ತುಕೊಂಡು ಮತ್ತೆ ಧೋನಿಗೇ ನಾಯಕತ್ವ ನೀಡಲಾಗಿತ್ತು. ಇದರ ಬಳಿಕ ಅಸಮಾಧಾನ ಭುಗಿಲೆದ್ದಿತ್ತು.