ಶುಬ್ಮನ್ ಗಿಲ್ ತಂಗಿ ಮೇಲೆ ಕೊಹ್ಲಿ ಫ್ಯಾನ್ಸ್ ಆಕ್ರೋಶ!

ಸೋಮವಾರ, 22 ಮೇ 2023 (16:37 IST)
Photo Courtesy: Twitter
ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧ ಐಪಿಎಲ್ 2023 ರ ಕೊನೆಯ ಪಂದ್ಯ ಸೋತು ಕೂಟದಿಂದ ಹೊರಬಿದ್ದ ಬಳಿಕ ಆರ್ ಸಿಬಿ ಫ್ಯಾನ್ಸ್ ಆಕ್ರೋಶ ಶುಬ್ಮನ್ ಗಿಲ್ ಮೇಲೆ ತಿರುಗಿದೆ.

ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಆರ್ ಸಿಬಿ 197 ರನ್ ಗಳ ಮೊತ್ತ ಪೇರಿಸಿತ್ತು. ಗುಜರಾತ್ ಗೆ ಈ ಪಂದ್ಯ ಔಪಚಾರಿಕವಾಗಿತ್ತಷ್ಟೇ. ಹಾಗಿದ್ದರೂ ಹಾಲಿ ಚಾಂಪಿಯನ್ ಈ ಪಂದ್ಯವನ್ನು ಹಗುರವಾಗಿ ಪರಿಗಣಿಸಲಿಲ್ಲ. ಗುಜರಾತ್ ಪರ ಶುಬ್ಮನ್ ಗಿಲ್ ಶತಕ ಸಿಡಿಸಿ ತಮ್ಮ ಪಂದ್ಯಕ್ಕೆ ಗೆಲುವು ಕೊಡಿಸಿದರು. ಇದರಿಂದ ಕೊಹ್ಲಿ ಶತಕ ವ್ಯರ್ಥವಾಗಿದ್ದಷ್ಟೇ ಅಲ್ಲದೆ, ಆರ್ ಸಿಬಿ ಕೂಟದಿಂದ ಹೊರಬಿತ್ತು.

ಹೀಗಾಗಿ ಕೆಲವು ಕೊಹ್ಲಿ ಅಭಿಮಾನಿಗಳ ಆಕ್ರೋಶ ಗಿಲ್ ಮೇಲೆ ತಿರುಗಿದೆ. ಶುಬ್ಮನ್ ಗಿಲ್ ಸಹೋದರಿ ಶಾಹ್ನೀ ಗಿಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ವೀಕ್ಷಿಸುವ ಫೋಟೋ ಪ್ರಕಟಿಸಿದ್ದರು. ಈ ಫೋಟೋಗೆ ಕೆಲವು ಕಿಡಿಗೇಡಿಗಳು ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ