ಐಪಿಎಲ್ 2023: ಇಂದು ಗುಜರಾತ್-ಸಿಎಸ್ ಕೆ ನಡುವೆ ಮ್ಯಾಚ್

ಮಂಗಳವಾರ, 23 ಮೇ 2023 (08:00 IST)
Photo Courtesy: Twitter
ಚೆನ್ನೈ: ಐಪಿಎಲ್ 2023 ರಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪ್ಲೇ ಆಫ್ ಪಂದ್ಯ ನಡೆಯಲಿದೆ.

ಗುಜರಾತ್ ಟೈಟನ್ಸ್ ಈ ಕೂಟದಲ್ಲಿ ಪ್ರಬಲ ತಂಡವಾಗಿದೆ. ಲೀಗ್ ಹಂತದಲ್ಲಿ ಟಾಪ್ 1 ತಂಡವಾಗಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಹಾಲಿ ಚಾಂಪಿಯನ್ ಗೆ ತಕ್ಕ ಆಟವಾಡಿದೆ.

ಇನ್ನೊಂದೆಡೆ ಧೋನಿ ನೇತೃತ್ವದ ಸಿಎಸ್ ಕೆ ಕೂಡಾ ಕಡಿಮೆಯೇನಲ್ಲ. ಸಿಎಸ್ ಕೆ ಧೋನಿ ನಾಯಕತ್ವವೇ ಪ್ಲಸ್ ಪಾಯಿಂಟ್. ಎಂತಹಾ ಪರಿಸ್ಥಿತಿಯಲ್ಲೂ ತಂಡವನ್ನು ನಾಜೂಕಾಗಿ ಕೊಂಡೊಯ್ಯುವ ಕಲೆ ಧೋನಿಗಿದೆ. ಹೀಗಾಗಿ ಇಂದು ಪ್ರಬಲ ಮತ್ತು ಚಾಂಪಿಯನ್ ತಂಡಗಳೆದುರಿನ ಜಿದ್ದಾಜಿದ್ದಿನ ಹೋರಾಟಕ್ಕೆ ಚಿಪಾಕ್ ಮೈದಾನ ವೇದಿಕೆಯಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ