ಏಷ್ಯಾ ಕಪ್: ಭಾರತ-ಬಾಂಗ್ಲಾ ನಡುವೆ ಇಂದು ಅಂತಿಮ ಸೂಪರ್ ಫೋರ್ ಪಂದ್ಯ

ಶುಕ್ರವಾರ, 15 ಸೆಪ್ಟಂಬರ್ 2023 (08:10 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಟೀಂ ಇಂಡಿಯಾ ಅಂತಿಮ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಈಗಾಗಲೇ ಎರಡು ಪಂದ್ಯ ಗೆದ್ದು ಫೈನಲ್ ಗೆ ಲಗ್ಗೆಯಿಟ್ಟಿರುವುದರಿಂದ ಭಾರತಕ್ಕೆ ಇದು ಪ್ರಯೋಗ ಪಂದ್ಯವಾಗಲಿದೆ. ಕಳೆದ ಎರಡು ಪಂದ್ಯಗಳನ್ನು ಮೂರು ದಿನಗಳ ಸತತವಾಗಿ ಆಡಿ ಆಟಗಾರರು ಸುಸ್ತಾಗಿದ್ದರು. ಇದಾದ ಬಳಿಕ ಎರಡು ದಿನ ವಿಶ್ರಾಂತಿ ಸಿಕ್ಕಿತ್ತು. ಇಂದಿನ ಪಂದ್ಯದಲ್ಲಿ ಭಾರತ ತನ್ನ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸುವ ಸಾ‍ಧ್ಯತೆಯಿದೆ.

ವೇಗಿ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಮುಂತಾದ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ. ಇದುವರೆಗೆ ಆಡುವ ಅವಕಾಶ ಸಿಗದ ಸೂರ್ಯಕುಮಾರ್ ಯಾದವ್, ಪ್ರಸಿದ್ಧ ಕೃಷ್ಣ, ಒಂದೇ ಪಂದ್ಯವಾಡಿರುವ ಮೊಹಮ್ಮದ್ ಶಮಿ ಮುಂತಾದ ಆಟಗಾರರಿಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಇನ್ನು, ಬೆನ್ನು ನೋವಿಗೊಳಗಾಗಿದ್ದ ಶ್ರೇಯಸ್ ಅಯ್ಯರ್ ಇಂದೂ ಆಡುವುದು ಅನುಮಾನ. ಈ ಪಂದ್ಯ ಅಪರಾಹ್ನ 3 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ