ಏಷ್ಯಾ ಕಪ್ ಕ್ರಿಕೆಟ್: ಲಂಕಾ-ಪಾಕ್ ಮಹತ್ವದ ಪಂದ್ಯಕ್ಕೆ ಭಾರೀ ಮಳೆ

ಗುರುವಾರ, 14 ಸೆಪ್ಟಂಬರ್ 2023 (16:15 IST)
ಕೊಲೊಂಬೊ: ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಮಹತ್ವದ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಯಾಗಿದೆ.

ಇಂದು ಕೊಲೊಂಬೋದಲ್ಲಿ ಹಿಂದೆಗಿಂತಲೂ ಅಧಿಕ ಮಳೆಯಾಗುತ್ತಿದ್ದು, 3 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯದಲ್ಲಿ ಇನ್ನೂ ಟಾಸ್ ಕೂಡಾ ನಡೆದಿಲ್ಲ. ರಾತ್ರಿ 8 ಗಂಟೆಯ ವೇಳೆಗೆ ಪಂದ್ಯ ನಡೆಯಲು ಅನುಕೂಲವಾದರೆ ಕನಿಷ್ಠ 20 ಓವರ್ ಗಳ ಗೇಮ್ ನಡೆಯಬಹುದು. ಇಲ್ಲದೇ ಹೋದರೆ ಪಂದ್ಯ ರದ್ದಾಗಿ ಅಂಕ ಹಂಚಿಕೆಯಾಗಲಿದೆ.

ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಗೆ ಅರ್ಹತೆ ಪಡೆಯಲಿದೆ. ಆದರೆ ಇಂದು ಪಂದ್ಯ ರದ್ದಾದರೆ ರನ್ ರೇಟ್ ಆಧಾರದಲ್ಲಿ ಶ್ರೀಲಂಕಾ ಫೈನಲ್ ಗೇರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ