ಕೊಹ್ಲಿಗೆ ತಾನೇ ಕೈಯಾರೆ ಮಾಡಿದ ಉಡುಗೊರೆ ಕೊಟ್ಟ ಲಂಕಾ ಅಭಿಮಾನಿ

ಗುರುವಾರ, 14 ಸೆಪ್ಟಂಬರ್ 2023 (10:21 IST)
Photo Courtesy: Twitter
ಬೆಂಗಳೂರು: ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಕಾಂತಾರ 2 ಗಾಗಿ ಸಿದ್ಧತೆಯಲ್ಲಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ರಿಷಬ್ ಆಂಡ್ ಟೀಂ ಬ್ಯುಸಿಯಾಗಿದೆ.

ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ ಬಜೆಟ್ 100 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಕಾಂತಾರ ಪಾರ್ಟ್ 1 ಕ್ಕಿಂತ ಮೊದಲಿನ ಕತೆಯನ್ನು ಕಾಂತಾರ 2 ರಲ್ಲಿ ಹೇಳುತ್ತಿರುವುದಾಗಿ ರಿಷಬ್ ಹೇಳಿಕೊಂಡಿದ್ದಾರೆ. ಹೀಗಾಗಿ ಹಳೆಯ ಕಾಲಘಟ್ಟಕ್ಕೆ ತಕ್ಕಂತೆ ಸೆಟ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಸಹಜವಾಗಿಯೇ ಖರ್ಚು ವೆಚ್ಚಗಳೂ ಅಧಿಕವಾಗುತ್ತಿದೆ.

ಕಾಂತಾರ 2 ಗಾರಿ ರಿಷಬ್ ಕುದುರೆ ಸವಾರಿ, ಕಳರಿಪಯಟ್ಟುನಂತಹ ಕೇರಳದ ಸಾಹಸ ವಿದ್ಯೆಯನ್ನೂ ಕಲಿತಿದ್ದಾರೆ. ಇದೀಗ ಈ ಪಾತ್ರಕ್ಕಾಗಿ ರಿಷಬ್ ತೂಕ ಇಳಿಕೆ ಮಾಡಿದ್ದು 11 ಕೆ.ಜಿ. ತೂಕ ಇಳಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರಿಷಬ್ ಉದ್ದ ದಾಡಿ, ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಕಾಂತಾರ 1 ಯಶಸ್ವಿಯಾಗಿರುವುದರಿಂದ ಕಾಂತಾರ 2 ರನ್ನು ಸಿದ್ಧತೆಯೊಂದಿಗೇ ನಿರ್ಮಾಣ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ