ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ಮಧ್ಯ ದ ಬೆರಳು ತೋರಿದ ಗೌತಮ್ ಗಂಭೀರ್

ಮಂಗಳವಾರ, 5 ಸೆಪ್ಟಂಬರ್ 2023 (07:48 IST)
Photo Courtesy: Twitter
ಪಲ್ಲಿಕೆಲೆ: ವಿರಾಟ್ ಕೊಹ್ಲಿ ಮೇಲೆ ಗೌತಮ್ ಗಂಭೀರ್ ಆಕ್ರೋಶ ಮುಂದುವರಿದಿದೆ. ಈ ಬಾರಿ ತಮ್ಮನ್ನು ಕಿಚಾಯಿಸಿದ ಕೊಹ್ಲಿ ಅಭಿಮಾನಿಗಳ ಮೇಲೆ ಗಂಭೀರ್ ಮಧ‍್ಯದ ಬೆರಳು ತೋರಿ ಅಶ್ಲೀಲ ವರ್ತನೆ ತೋರಿದ್ದಾರೆ.

ಏಷ್ಯಾ ಕಪ್ ನಲ್ಲಿ ನೇಪಾಳ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿ ಗಂಭೀರ್ ರನ್ನು ನೋಡುತ್ತಿದ್ದಂತೇ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಎಂದು ಘೋಷಣೆ ಕೂಗಿದರು.

ಇದರಿಂದ ಕುಪಿತಗೊಂಡ ಗಂಭೀರ್ ಅಭಿಮಾನಿಗಳತ್ತ ಮಧ‍್ಯದ ಬೆರಳು ತೋರಿ ಅಶ್ಲೀಲ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಬಾರಿ ಐಪಿಎಲ್ ಪಂದ್ಯದ ವೇಳೆ ಗಂಭೀರ್-ಕೊಹ್ಲಿ ನಡುವೆ ಮೈದಾನದಲ್ಲಿ ನಡೆದಿದ್ದ ಘರ್ಷಣೆ ಬಳಿಕ ಗಂಭೀರ್ ಎಲ್ಲೇ ಹೋದರೂ ಕೊಹ್ಲಿ ಅಭಿಮಾನಿಗಳು ಕಿಚಾಯಿಸುತ್ತಲೇ ಇರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ