ಮಧ್ಯದ ಬೆರಳು ತೋರಿಸಿದ್ದು ಕೊಹ್ಲಿ ಫ್ಯಾನ್ಸ್ ಗಲ್ಲ, ದೇಶದ್ರೋಹಿಗಳಿಗೆ: ಗೌತಮ್ ಗಂಭೀರ್ ಸ್ಪಷ್ಟನೆ

ಬುಧವಾರ, 6 ಸೆಪ್ಟಂಬರ್ 2023 (09:20 IST)
ನವದೆಹಲಿ: ಮೊನ್ನೆಯಷ್ಟೇ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಪಂದ್ಯದ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗಿದವರತ್ತ ಮಧ್ಯ ಬೆರಳು ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿ ಮತ್ತು ಗಂಭೀರ್ ನಡುವೆ ಐಪಿಎಲ್ ನಲ್ಲಿ ಘರ್ಷಣೆ ನಡೆದ ಮೇಲೆ ಗಂಭೀರ್ ಎಲ್ಲೇ ಹೋದರೂ ಕೊಹ್ಲಿ ಹೆಸರೆತ್ತಿ ಘೋಷಣೆ ಮಾಡುವ ಮೂಲಕ ಕಿಚಾಯಿಸುವುದು ಮಾಮೂಲಾಗಿತ್ತು. ಅದೇ ರೀತಿ ಮೊನ್ನೆಯೂ ಗಂಭೀರ್ ರನ್ನು ನೋಡಿ ಕೊಹ್ಲಿ ಕೊಹ್ಲಿ ಎಂದು ಅಭಿಮಾನಿಗಳು ಘೋಷಣೆ ಮಾಡುತ್ತಿರುವಾಗ ಗಂಭೀರ್ ಪ್ರೇಕ್ಷಕರತ್ತ ಮಧ‍್ಯ ಬೆರಳು ತೋರಿ ಅಶ್ಲೀಲ ಸನ್ನೆ ಮಾಡಿದ್ದರು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಂಭೀರ್ ನಾನು ಮಧ್ಯ ಬೆರಳು ತೋರಿದ್ದು ಅಭಿಮಾನಿಗಳಿಗಲ್ಲ. ಅಲ್ಲೇ ಗುಂಪಿನಲ್ಲಿದ್ದ ಕೆಲವು ಪಾಕ್ ಅಭಿಮಾನಿಗಳು ಹಿಂದೂಸ್ಥಾನ್ ಮುರ್ದಾಬಾದ್ ಎಂದು ದೇಶದ ವಿರುದ್ಧ ಘೋಷಣೆ ಕೂಗುತ್ತಿದ್ದರು. ನನ್ನ ದೇಶದ ಬಗ್ಗೆ ಯಾರೋ ಈ ರೀತಿ ಮಾತನಾಡುವಾಗ ಸುಮ್ಮನೇ ಕೂರುವುದಿಲ್ಲ. ಅವರ ವಿರುದ್ಧ ಆ ರೀತಿ ಸನ್ನೆ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ