ಕಳೆದ ಐದು ವರ್ಷಗಳ ಟೀಂ ಇಂಡಿಯಾ ಪರ ಗರಿಷ್ಠ ಕ್ಯಾಚ್ ಡ್ರಾಪ್ ಮಾಡಿದ ಆಟಗಾರ ಯಾರು ಗೊತ್ತೇ?!

ಮಂಗಳವಾರ, 5 ಸೆಪ್ಟಂಬರ್ 2023 (07:31 IST)
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ನಿನ್ನೆ ಟೀಂ ಇಂಡಿಯಾ ಫೀಲ್ಡರ್ ಗಳು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲ ನಾಲ್ಕು ಓವರ್ ಗಳಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ ಟೀಕೆಗೊಳಗಾಗಿದ್ದರು.

ಟೀಂ ಇಂಡಿಯಾ ವಿಕೆಟ್ ಕೀಪರ್ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿದ ಕ್ರಿಕೆಟಿಗರು. ಆದರೆ ಕಳೆದ ಐದು ವರ್ಷಗಳಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ಕ್ಯಾಚ್ ಡ್ರಾಪ್ ಮಾಡಿದ ಆಟಗಾರ ಯಾರು ಗೊತ್ತಾ?

ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಲ್ಲಿ 37 ಬಾರಿ ಕ್ಯಾಚ್ ಡ್ರಾಪ್ ಮಾಡಿದ್ದಾರೆ. ರೋಹಿತ್ ಶರ್ಮಾ 25, ಶ್ರೇಯಸ್ ಅಯ್ಯರ್ 11 ಬಾರಿ ಡ್ರಾಪ್ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು, ಅರ್ಷ್ ದೀಪ್ ಸಿಂಗ್ 9, ಕೆಎಲ್‍ ರಾಹುಲ್ 6 ಬಾರಿ ಕ್ಯಾಚ್ ಡ್ರಾಪ್ ಮಾಡಿದ ಕುಖ್ಯಾತಿಗೊಳಗಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ