ಏಷ್ಯಾ ಕಪ್ ಕ್ರಿಕೆಟ್: ರೋಹಿತ್ ಶರ್ಮಾ-ಗಿಲ್ ಜೋಡಿ ಮಾಡಿದ ದಾಖಲೆಗಳು

ಮಂಗಳವಾರ, 5 ಸೆಪ್ಟಂಬರ್ 2023 (07:20 IST)
Photo Courtesy: Twitter
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ನೇಪಾಳವನ್ನು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 10 ವಿಕೆಟ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಆರಂಭಿಕರು ಹೊಸ ದಾಖಲೆಗಳನ್ನು ಮಾಡಿದ್ದಾರೆ.

ಆರಂಭಿಕರಾದ ರೋಹಿತ್ ಶರ್ಮಾ-ಶುಬ್ನಮ್ ಗಿಲ್ ಜೋಡಿ ಶತಕದ ಜೊತೆಯಾಟವಾಡಿದೆ. ಇದು ಏಷ್ಯಾ ಕಪ್ ನಲ್ಲಿ ಭಾರತದ ಪರ ಮೂರನೇ ಗರಿಷ್ಠ ಆರಂಭಿಕ ಜೊತೆಯಾಟವಾಗಿದೆ. ಅಲ್ಲದೆ 10 ವಿಕೆಟ್ ಗಳ ಗೆಲುವಿನ ಪಂದ್ಯದಲ್ಲಿ ಆರಂಭಿಕ ವಿಕೆಟ್ ಗೆ ನಾಲ್ಕನೇ ಗರಿಷ್ಠ ರನ್ ಜೊತೆಯಾಟವಾಗಿದೆ.

ಇನ್ನು, ಏಷ್ಯಾ ಕಪ್ ನಲ್ಲಿ ಒಂದು ಇನಿಂಗ್ಸ್ ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಐದನೇ ಸ್ಥಾನ ಪಡೆದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ತಮ್ಮ ಸಿಕ್ಸರ್ ಗಳಿಕೆಯನ್ನು 538 ಕ್ಕೇರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ