ಏಷ್ಯಾ ಕಪ್ ಕ್ರಿಕೆಟ್: ನೇಪಾಳ ಸೋಲಿಸಿ ಸೂಪರ್ ಫೋರ್ ಗೆ ಕಾಲಿಟ್ಟ ಟೀಂ ಇಂಡಿಯಾ
ಮಳೆಯಿಂದಾಗಿ ಭಾರತದ ಬ್ಯಾಟಿಂಗ್ ಸರದಿಯನ್ನು 27 ಓವರ್ ಗಳಿಗೆ ಕಡಿತ ಮಾಡಲಾಯಿತು. 27 ಓವರ್ ಗಳಲ್ಲಿ 145 ಗುರಿ ನಿಗದಿಯಾಗಿತ್ತು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಕೈಹಾಕಿದ ರೋಹಿತ್ ಶರ್ಮಾ, ಶುಬ್ನನ್ ಗಿಲ್ ಬಳಿಕ ನೇಪಾಳ ಬೌಲರ್ ಗಳನ್ನು ದಂಡಿಸಿದರು.
ರೋಹಿತ್ ಶರ್ಮಾ 59 ಎಸೆತಗಳಿಂದ ಅಜೇಯ 74, ಗಿಲ್ 61 ಎಸೆತಗಳಿಂದ ಅಜೇಯ 63 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 20.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 147 ರನ್ ಗಳಿಸಿ ಗೆಲುವು ಕಂಡಿತು. ಇದರೊಂದಿಗೆ ಸೂಪರ್ ಫೋರ್ ಹಂತದಲ್ಲಿ ಸೆಪ್ಟೆಂಬರ್ 10 ರಂದು ಮತ್ತೊಮ್ಮೆ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.