ಏಷ್ಯಾ ಕಪ್ ಕ್ರಿಕೆಟ್: ಬಾಂಗ್ಲಾ ಎದುರು ತಡಬಡಾಯಿಸಿದ ಲಂಕಾ

ಶನಿವಾರ, 9 ಸೆಪ್ಟಂಬರ್ 2023 (17:36 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಬ್ಯಾಟಿಂಗ್ ಕೊಂಚ ತಡಬಡಾಯಿಸಿದಂತಾಗಿದೆ.

ಇಂದಿನ ಸೂಪರ್ ಫೋರ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಆರಂಭಿಕ ನಿಸಂಕಾ 40, ಕುಸಲ್ ಮೆಂಡಿಸ್ 50 ರನ್ ಗಳಿಸಿದರು. ಇದೀಗ ಕ್ರೀಸ್ ನಲ್ಲಿ ಸಮರವಿಕ್ರಮ 30 ಮತ್ತು ಧನಂಜಯ ಡಿಸಿಲ್ವ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇತ್ತೀಚೆಗಿನ ವರದಿ ಬಂದಾಗ ಲಂಕಾ 36 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ. ಅತಿಥೇಯರಿಗೆ ನಿರೀಕ್ಷಿಸಿದಷ್ಟು ರನ್ ಆಗಲಿಲ್ಲವಾದರೂ ಪೈಪೋಟಿಯುತ ಮೊತ್ತ ಪೇರಿಸುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ