ಗೌತಮ್ ಗಂಭೀರ್ ಕೈ ಬಿಡದ ಲಕ್ನೋ ಸೂಪರ್ ಜೈಂಟ್ಸ್

ಶನಿವಾರ, 9 ಸೆಪ್ಟಂಬರ್ 2023 (17:21 IST)
ಮುಂಬೈ: ಐಪಿಎಲ್‍ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಹೊಸ ಸಹಾಯಕ ಸಿಬ್ಬಂದಿಗಳನ್ನು ನೇಮಿಸಲಿದೆ ಎಂದು ಅನುಮಾನಗಳಿತ್ತು. ಅದು ನಿಜವಾಗಿದೆ. ಆದರೆ ಮೆಂಟರ್ ಸ್ಥಾನದಿಂದ ಗೌತಮ್ ಗಂಭಿರ್ ರನ್ನು ಕಿತ್ತೊಗೆದಿಲ್ಲ.

ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ವಿರುದ್ಧ ಆಡುವಾಗ ಕೊಹ್ಲಿ ಮತ್ತು ಗಂಭೀರ್ ನಡುವೆ ಮೈದಾನದಲ್ಲಿ ಮಾತಿನ ಚಕಮಕಿಯಾಗಿತ್ತು. ಅದಾದ ಬಳಿಕ ಲಕ್ನೋ ಮಾಲಿಕರು ಮುಂದಿನ ಸೀಸನ್ ಗೆ ಗಂಭೀರ್ ರನ್ನು ತಂಡದಿಂದ ಹೊರಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಲಕ್ನೋ ಗಂಭೀರ್ ರನ್ನು ಮೆಂಟರ್ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಿದೆ. ಆದರೆ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಅವರನ್ನು ನೇಮಕ ಮಾಡಿದೆ. ನಾಯಕರಾಗಿ ಕೆಎಲ್ ರಾಹುಲ್ ಮುಂದುವರಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ