ಏಷ್ಯಾ ಕಪ್ ಕ್ರಿಕೆಟ್: ಕೆಎಲ್ ರಾಹುಲ್ ಔಟ್, ಮತ್ತೆ ಸಂಕಷ್ಟದಲ್ಲಿ ಟೀಂ ಇಂಡಿಯಾ

ಮಂಗಳವಾರ, 12 ಸೆಪ್ಟಂಬರ್ 2023 (17:15 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 154 ರನ್ ಗೆ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಸಂಕಷ್ಟದಲ್ಲಿದೆ.

ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ ಅಕ್ಸರ್ ಪಟೇಲ್ ರನ್ನು ಕಣಕ್ಕಿಳಿಸಿತು. ನಾಯಕ ರೋಹಿತ್ ಶರ್ಮಾ ಹ್ಯಾಟ್ರಿಕ್ ಅರ್ಧಶತಕ (53) ಗಳಿಸಿದರು. ಇನ್ನೊಬ್ಬ ಆರಂಭಿಕ ಶುಬ್ಮನ್ ಗಿಲ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ವಿರಾಟ್ ಕೊಹ್ಲಿ ಕೂಡಾ 3 ರನ್ ಗಳಿಸಿ ಔಟಾದಾಗ ಟೀಂ ಇಂಡಿಯಾ ಸಂಕಷ್ಟಕ್ಕೀಡಾಯಿತು.

ಈ  ವೇಳೆ ಕೆಎಲ್ ರಾಹುಲ್-ಇಶಾನ್ ಕಿಶನ್ ಜೋಡಿ ಜೊತೆಯಾಯಿತು. ಇಬ್ಬರೂ 63 ರನ್ ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ಮತ್ತೆ ವೆಲಲಾಗೇ ಸ್ಪಿನ್ ಮ್ಯಾಜಿಕ್ ನಡೆಯಿತು. ಉತ್ತಮ ಲಯದಲ್ಲಿದ್ದ ಕೆಎಲ್ ರಾಹುಲ್ 39 ರನ್ ಗಳಿಸಿ ಔಟಾಗುತ್ತಿದ್ದಂತೇ ಭಾರತ ಮತ್ತೆ ಸಂಕಷ್ಟದಲ್ಲಿದೆ. ಇದೀಗ 30 ಓವರ್ ಗಳಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ವಿಶೇಷವೆಂದರೆ ಎಲ್ಲಾ ವಿಕೆಟ್ ಗಳೂ ಲಂಕಾ ಸ್ಪಿನ್ನರ್ ವಲಲಾಗೇ ಪಾಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ