ರೋಹಿತ್ ಶರ್ಮಾ ಯಾಕೆ ಬೌಲಿಂಗ್ ಮಾಡಲ್ಲ? ಉತ್ತರ ಕೊಟ್ಟ ಹಿಟ್ ಮ್ಯಾನ್
ಐಪಿಎಲ್ ನಲ್ಲಿ ರೋಹಿತ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯನ್ನೂ ಹೊಂದಿದ್ದಾರೆ. ಟೀಂ ಇಂಡಿಯಾ ಪರವೂ ಧೋನಿ ನಾಯಕರಾಗಿದ್ದಾಗ ಕೆಲವೊಮ್ಮೆ ಅಗತ್ಯ ಬಂದಾಗ ಬೌಲಿಂಗ್ ಮಾಡಿದ್ದಿದೆ. ಆದರೆ ಈಗ ಅವರು ಬೌಲಿಂಗ್ ಮಾಡುವುದನ್ನೇ ಬಿಟ್ಟಿದ್ದಾರೆ. ಅದಕ್ಕೆ ಕಾರಣವೇನೆಂದು ಅವರು ಹೇಳಿದ್ದಾರೆ.
ಬೌಲಿಂಗ್ ಮಾಡುವಾಗ ನನಗೆ ಕೈ ಬೆರಳು ನೋವು ಬರುತ್ತಿತ್ತು. ಇದರಿಂದ ನನ್ನ ಬ್ಯಾಟಿಂಗ್ ಗೆ ತೊಂದರೆಯಾಗುವುದು ನನಗೆ ಇಷ್ಟವಿಲ್ಲ. ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತೇನೆ. ಮುಂದೆ ನೋಡೋಣ ಎಂದಿದ್ದಾರೆ.