ಸ್ಟ್ರಿಪ್ ಕ್ಲಬ್ ವಿವಾದದ ಬಗ್ಗೆ ಕೆಎಲ್ ರಾಹುಲ್ ಪರ ಪತ್ನಿ ಪ್ರತಿಕ್ರಿಯೆ

ಸೋಮವಾರ, 29 ಮೇ 2023 (08:30 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸ್ಟ್ರಿಪ್ ಕ್ಲಬ್ (ಬೆತ್ತಲೆ ಕೂಟ)ನಲ್ಲಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೇ ಅವರ ಪತ್ನಿ ಅಥಿಯಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಗಾಯಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿರುವ ಕೆಎಲ್ ರಾಹುಲ್ ಲಂಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಅವರು ಕ್ಲಬ್ ಗೆ ತೆರಳಿರುವ ಫೋಟೋ ವೈರಲ್ ಆಗಿತ್ತು. ಆದರೆ ಬೆತ್ತಲೆ ಕೂಟದಲ್ಲಿ ಅವರು ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಈ ಸುದ್ದಿ ವೈರಲ್ ಆಗುತ್ತಿದ್ದಂತೇ ಅವರ ಪತ್ನಿ ಅಥಿಯಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸಾಮಾನ್ಯವಾಗಿ ಇಂತಹ ಸುದ್ದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಬಾರಿ ಸುಮ್ಮನಿರುವುದು ಸರಿಯಲ್ಲ ಎನಿಸಿತು. ನಾನು, ರಾಹುಲ್ ಹಾಗೂ ಗೆಳೆಯರು ನಾವು ಸಾಮಾನ್ಯವಾಗಿ ಹೋಗುವ ಸ್ಥಳಕ್ಕೆ ತೆರಳಿದ್ದೆವು. ಇದಕ್ಕೆ ರೆಕ್ಕೆಪುಕ್ಕ ಕಟ್ಟಬೇಕಾಗಿಲ್ಲ. ನಿಮ್ಮ ವರದಿಗಳನ್ನು ನೀಡುವ ಮೊದಲು ನಿಜವೇ ಎಂದು ಮತ್ತೊಮ್ಮೆ ಪರಿಶೀಲಿಸಿ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ